ಪ್ರಚೋದನಾಕಾರಿ ಹೇಳಿಕೆ: ಅಕ್ಬರುದ್ದೀನ್ ಓವೈಸಿ ವಿರುದ್ಧ ಎಫ್ಐಆರ್ ದಾಖಲು

ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್‌ ಓವೈಸಿ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ...
ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್‌ ಓವೈಸಿ (ಸಂಗ್ರಹ ಚಿತ್ರ)
ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್‌ ಓವೈಸಿ (ಸಂಗ್ರಹ ಚಿತ್ರ)

ಕಿಶನ್‌ಗಂಜ್‌: ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್‌ ಓವೈಸಿ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ.

ಬಿಹಾರ ಚುನಾವಣೆ ನಿಮಿತ್ತ ಕಿಶನ್‌ಗಂಜ್‌ನಲ್ಲಿ ಭಾನುವಾರ ತಮ್ಮ ಮೊದಲ ಪ್ರಚಾರ ಭಾಷಣ ಮಾಡಿದ್ದ ಅಕ್ಬರುದ್ದೀನ್‌ ಓವೈಸಿ, ಬಿಜೆಪಿ ನಾಯಕರ ವಿರುದ್ಧ ಹಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಹೇಳಲಾಗುತ್ತಿತ್ತು. ಓವೈಸಿ ಹೇಳಿಕೆ ನಂತರ ಸ್ಥಳದಲ್ಲಿ ಎರಡು ಸಮುದಾಯದ ನಡುವೆ ಘರ್ಷಣೆ ಏರ್ಪಟ್ಟಿತ್ತಲ್ಲದೆ, ಸ್ಥಳೀಯ 2 ದೇವಾಲಯಗಳಲ್ಲಿದ್ದ ಮೂರ್ತಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು.

ಹೀಗಾಗಿ ಅಕ್ಬರುದ್ಧೀನ್ ಓವೈಸಿ ಹೇಳಿಕೆ ವಿರುದ್ಧ ಐಪಿಸಿ ಸೆಕ್ಷನ್ 144, 153ಎ ಮತ್ತು 188ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಚಾರ ವೇಳೆ ಓವೈಸಿ ಅವರು ಕಾಯ್ದೆಯನ್ನು ಉಲ್ಲಂಘಿಸಿ ಪ್ರಚೋದನಾಕಾರಿ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ದೇವಾಲಯದ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ರಂಜನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com