ಉ.ಪ್ರದೇಶ ಸಾಮಾನ್ಯರಿಗಷ್ಟೇ ಅಷ್ಟೇ ಅಲ್ಲ, ಪೊಲೀಸರಿಗೂ ಸುರಕ್ಷಿತವಲ್ಲ..!

ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಉತ್ತರ ಪ್ರದೇಶ ರಾಜ್ಯದಲ್ಲಿ ಪೊಲೀಸರಿಗೂ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದ್ದು, ಪೊಲೀಸರ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ...
ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ (ಸಾಂದರ್ಭಿಕ ಚಿತ್ರ)
ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ (ಸಾಂದರ್ಭಿಕ ಚಿತ್ರ)

ಇಟಾವಾ: ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಉತ್ತರ ಪ್ರದೇಶ ರಾಜ್ಯದಲ್ಲಿ ಪೊಲೀಸರಿಗೂ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದ್ದು, ಪೊಲೀಸರ ಮಹಿಳಾ ಪೊಲೀಸ್ ಪೇದೆಯೊಬ್ಬರ  ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಇಟಾವಾ ನಗರದಲ್ಲಿ ಈ ಹೀನ ಕೃತ್ಯ ವರದಿಯಾಗಿದ್ದು, ನಗರದಲ್ಲಿ ನಡೆಯುತ್ತಿದ್ದ ಮೌರಾನಿ ಪುರ್ ಮೇಳ ಉತ್ಸವದ ಭದ್ರತೆಗಾಗಿ ನೇಮಕಗೊಂಡಿದ್ದ ಮಹಿಳಾ ಪೊಲೀಸ್  ಪೇದೆಯೊಬ್ಬರ ಮೇಲೆ ಅದೇ ತಂಡದ ಮೂವರು ಪೊಲೀಸ್ ಪೇದೆಗಳು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಝಾನ್ಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ  ಪೊಲೀಸ್ ಪೇದೆಯನ್ನು ಮೌರಾನಿ ಪುರ್ ಮೇಳ ಉತ್ಸವದ ನಿಮಿತ್ತ ಅವರನ್ನು ಭದ್ರತೆಗಾಗಿ ಅಲ್ಲಿ ನಿಯೋಜಿಸಲಾಗಿತ್ತು. ಇದೇ ಜಾಗಕ್ಕೆ ಝಾನ್ಸಿ ಠಾಣೆಯ ಪೊಲೀಸ್ ಪೇದೆ ಅಜಯ್ ಯಾದವ್,  ಔರಿಯಾ ಠಾಣೆಯ ರಾಜಾ ಭಾಯಿ ಮತ್ತು ಪೊಲೀಸ್ ಜೀಪ್ ನ ಚಾಲಕ ಮೂವರು ಸೇರಿ ಅತ್ಯಾಚಾರ ಎಸಗಿದ್ದಾರೆ.

ಪ್ರಸ್ತುತ ಈ ವಿಚಾರವನ್ನು ಮಹಿಳಾ ಪೊಲೀಸ್ ಪೇದೆ ಕಾನ್ ಪುರ ಐಜಿಪಿ ಅವರಿಗೆ ತಿಳಿಸಿದ್ದು, ಪ್ರಕರಣ ಸಂಬಂಧ ದೂರು ಕೂಡ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com