ರೈಲ್ವೇ ನೌಕರರಿಗೆ ಹಬ್ಬದ ಉಡುಗೊರೆ, ಕೇಂದ್ರ ಸಂಪುಟದಿಂದ ಬೋನಸ್ ಗೆ ಅಸ್ತು

ಕೇಂದ್ರ ರೈಲ್ವೇ ನೌಕರರಿಗೆ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ಉಡುಗೊರೆ ನೀಡಿದ್ದು, ಇಲಾಖೆಯ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ...
ರೈಲ್ವೇ ಇಲಾಖೆ ನೌಕರರಿಗೆ ಬೋನಸ್ (ಸಾಂದರ್ಭಿಕ ಚಿತ್ರ)
ರೈಲ್ವೇ ಇಲಾಖೆ ನೌಕರರಿಗೆ ಬೋನಸ್ (ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರ ರೈಲ್ವೇ ನೌಕರರಿಗೆ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ಉಡುಗೊರೆ ನೀಡಿದ್ದು, ಇಲಾಖೆಯ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರೈಲ್ವೇ ಇಲಾಖೆಯ ನೌಕರರಿಗೆ ಬೋನಸ್ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ 3 ವರ್ಷಗಳಲ್ಲಿ ನೀಡಿದಂತೆ 2014-15ರ ಹಣಕಾಸು ವರ್ಷದಲ್ಲಿಯೂ ಉತ್ಪಾದನೆ ಆಧಾರಿತ ಬೋನಸ್ ಆಗಿ 78 ದಿನಗಳ ವೇತನವನ್ನು ನೌಕರರಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವ ಸಂಪುಟದ ನಿರ್ಧಾರದಿಂದಾಗಿ ಸುಮಾರು 12 ಲಕ್ಷ ರೈಲ್ವೇ ನೌಕರರು ಈ ತಿಂಗಳಲ್ಲಿ ತಲಾ ಅಂದಾಜು 8897 ರೂಪಾಯಿಗಳನ್ನು ಪಡೆಯುವರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 800 ಕೋಟಿ ರೂಪಾಯಿಗಳ ಹೆಚ್ಚಿನ ಹೊರೆಯಾಗುವುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. 2011-12, 2012-13 ಮತ್ತು 2013-14ರ ಸಾಲಿನಲ್ಲೂ 78 ದಿನಗಳ ವೇತನವನ್ನು ರೈಲ್ವೇ ನೌಕರರಿಗೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com