ಪ್ರಮಾದವಶಾತ್ ದೈಹಿಕ ಸಂಪರ್ಕ ವ್ಯಭಿಚಾರವಲ್ಲ: ಗುಜರಾತ್ ಹೈಕೋರ್ಟ್

ಪ್ರಮಾದವಶಾತ್ ಅಥವಾ ನಿರುದ್ದೇಶಪೂರ್ವಕವಾಗಿ ಒಂದೆರಡು ಬಾರಿ ವೈವಾಹಿಕ ಸಂಬಂಧಕ್ಕಿಂತ ಆಚೆಗೆ ಇನ್ನೊಬ್ಬರೊಂದಿಗೆ ದೈಹಿಕ ಸಂಪರ್ಕ ಅಥವಾ ಸಾಮೀಪ್ಯ ಹೊಂದುವುದು ವ್ಯಭಿಚಾರವಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಪ್ರಮಾದವಶಾತ್ ಅಥವಾ ನಿರುದ್ದೇಶಪೂರ್ವಕವಾಗಿ ಒಂದೆರಡು ಬಾರಿ ವೈವಾಹಿಕ ಸಂಬಂಧಕ್ಕಿಂತ ಆಚೆಗೆ ಇನ್ನೊಬ್ಬರೊಂದಿಗೆ ದೈಹಿಕ ಸಂಪರ್ಕ ಅಥವಾ ಸಾಮೀಪ್ಯ  ಹೊಂದುವುದು ವ್ಯಭಿಚಾರವಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ವಿವಾಹೇತರ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮಾದವಶಾತ್ ಅಥವಾ ನಿರುದ್ದೇಶಪೂರ್ವಕವಾಗಿ ನಡೆಯುವ ದೈಹಿಕ ಸಂಪರ್ಕಗಳನ್ನು  ವ್ಯಭಿಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಬೇರೋಬ್ಬ ಸಂಗಾತಿಯೊಂದಿಗೆ ಉದ್ದೇಶಪೂರ್ವಕವಾಗಿ ಸತತ ಲೈಂಗಿಕ ಸಂಪರ್ಕ ಸಾಧಿಸುವುದು ವ್ಯಭಿಚಾರ ಎನಿಸಿಕೊಳ್ಳುತ್ತದೆ  ಎಂದು ನ್ಯಾಯಾಲಯ ಹೇಳಿದೆ.

ಗುಜರಾತ್ ಪಟಾನ್ ಕೋಟ್ ನ ಮಹಿಳೆಯೊಬ್ಬಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು. ಮಹಿಳೆಯ ಗಂಡ ಆಕೆಯ ವಿವಾಹೇತರ ಸಂಬಂಧದಿಂದ ಬೇಸತ್ತು  ಮಗುವನ್ನು ತೆಗೆದುಕೊಂಡು ಹೋಗಿದ್ದ. ಇದರಿಂದ ಕುಪಿತಳಾಗಿದ್ದ ಮಹಿಳೆ ತನ್ನ ಗಂಡನ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಅರ್ಜಿಸಲ್ಲಿಕೆ ಮಾಡಿದ್ದಳು.  ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಪ್ರಕರಣದಲ್ಲಿ ಮಹಿಳೆಯೇ ಉದ್ದೇಶ ಪೂರ್ವಕವಾಗಿ ಬೇರೊಬ್ಬನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಕುರಿತು ಮನಗಂಡು ಆಕೆಗೆ  ಪರಿಹಾರ ನಿರಾಕರಿಸಿತ್ತು. ಬಳಿಕ ಮಹಿಳೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಳು.

ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ್ದಿದ್ದು, ಪ್ರಕರಣದ ಕಕ್ಷೀದಾರಳಾದ ಮಹಿಳೆಗೆ ಪರಿಹಾರಧನವನ್ನು ತಡೆಹಿಡಿದಿದೆ. ಅಲ್ಲದೆ ಮಗುವಿನ ಸುಪರ್ದಿಯನ್ನು  ಮಗುವಿನ ತಂದೆಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com