ಗೋಮಾಂಸ ಪಾರ್ಟಿ: ಪ್ರತಿಭಟನೆಗಿಳಿದ ಥಳಿಕ್ಕೊಳಗಾದ ಶಾಸಕ ರಶೀದ್

ಕಾಶ್ಮೀರದಲ್ಲಿ ಗೋಮಾಂಸ ಪಾರ್ಟಿ ಆಯೋಜಿಸಿ ಹಲವು ವಿವಾದಕ್ಕೆ ಕಾರಣವಾಗಿ ನಿನ್ನೆಯಷ್ಟೇ ಥಳಿತಕ್ಕೊಳಗಾಗಿದ್ದ ಬಿಜೆಪಿ ಶಾಸಕ ಎಂಜಿನಿಯರ್ ರಶೀದ್ ಇದೀಗ ಘಟನೆ ಖಂಡಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲದೆದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ...
ಪ್ರತಿಭಟನಾನಿರತ ಶಾಸಕ ಎಂಜಿನಿಯರ್ ರಶೀದ್
ಪ್ರತಿಭಟನಾನಿರತ ಶಾಸಕ ಎಂಜಿನಿಯರ್ ರಶೀದ್

ಶ್ರೀನಗರ: ಕಾಶ್ಮೀರದಲ್ಲಿ ಗೋಮಾಂಸ ಪಾರ್ಟಿ ಆಯೋಜಿಸಿ ಹಲವು ವಿವಾದಕ್ಕೆ ಕಾರಣವಾಗಿ ನಿನ್ನೆಯಷ್ಟೇ ಥಳಿತಕ್ಕೊಳಗಾಗಿದ್ದ ಬಿಜೆಪಿ ಶಾಸಕ ಎಂಜಿನಿಯರ್ ರಶೀದ್ ಇದೀಗ ಘಟನೆ ಖಂಡಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲದೆದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

ರಶೀದ್ ಪ್ರತಿಭಟನೆಗೆ ಇದೀಗ ಜಮ್ಮು ಮತ್ತು ಕಾಶ್ಮೀರದ ಸ್ವತಂತ್ರ ಶಾಸಕರು ಕೂಡ ಸಾಥ್ ನೀಡಿದ್ದು, ವಿಧಾನಮಂಡಲದೆದರು ನೂರಾರು ನಾಯಕರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆ ವೇಳೆ ಕೆಲವು ನಾಯಕರು ವಿಧಾನಮಂಡಲದೊಳಗೆ ಹೋಗಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿರುವ ಘಟನೆಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

ಪ್ರತಿಭಟನೆ ಕುರಿತಂತೆ ಮಾತನಾಡಿರುವ ಇಂಜಿನಿಯರ್ ರಶೀದ್ ಅವರು, ವಿಧಾನಮಂಡಲದಲ್ಲಿ ಗೋಮಾಂಸ ನಿಷೇಧ ಮಸೂದೆ ಜಾರಿಯಾಗಲು ನಾವು ಬಿಡುವುದಿಲ್ಲ. ಗೋಮಾಂಸ ನಿಷೇಧವು ಮ್ಯಾಚ್ ಫಿಕ್ಸಿಂಗ್ ನಂತಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ನೇರಹೊಣೆ. ನಿನ್ನೆ ಘಟನೆಯನ್ನು ಗಮನಿಸಿದರೆ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯ್ಯೀದ್ ಅವರು ತಮ್ಮ ಅಧಿಕಾರವನ್ನು ಮುಂದವರೆಸಲು ಲಾಯಕ್ಕಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪಕ್ಷೇತರ ಶಾಸಕ ಅಬ್ದುಲ್ ರಶೀದ್ ಗೋಮಾಂಸ ನಿಷೇಧ ಚರ್ಚೆಯ ನಡುವೆಯೂ ಇದನ್ನು ವಿರೋಧಿಸಿ ಬುಧವಾರ ಗೋಮಾಂಸದ ಔತಣಕೂಟ ಆಯೋಜಿಸಿದ್ದರು. ಈ ವಿಚಾರ ಗುರುವಾರ ಬೆಳಗ್ಗೆ ವಿಧಾನಸಭೆ ಆರಂಭದ ಸಮಯದಲ್ಲಿಯೇ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ವೇಳೆ ಬಿಜೆಪಿ ಶಾಸಕ ರವೀಂದ್ರ ರೈನಾ ಮತ್ತು ಪಕ್ಷೇತರ ಶಾಸಕ ರಶೀದ್ ನಡುವಿನ ಚರ್ಚೆ ತಾರಕಕ್ಕೇರಿ ಇಬ್ಬರೂ ತಾವು ಶಾಸಕರು ಎನ್ನುವುದನ್ನು ಮರೆತು ವಿಧಾನಸಭೆಯಲ್ಲೇ ಹೊಡೆದಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com