ದಾದ್ರಿ ಪ್ರಕರಣ: ಮೃತ ಅಖ್ಲಾಕ್ ಮಗ ಸೇನಾ ಆಸ್ಪತ್ರೆಗೆ ವರ್ಗಾವಣೆ

ಗೋಮಾಂಸ ಸೇವನೆ ಶಂಕೆಯಿಂದಾಗಿ ದಾದ್ರಿಯ ಮುಸ್ಲಿಂ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ನ ಮಗ ದಾನೀಶ್ ನನ್ನು ನೊಯ್ಡಾ ಕೈಲಾಶ್ ಆಸ್ಪತ್ರೆಯಿಂದ ಸೇನಾ ಸಂಶೋಧನಾ ಆಸ್ಪತ್ರೆಗೆ ಶನಿವಾರ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ...
ದಾದ್ರಿ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ನ ಮಗ ದಾನೀಶ್
ದಾದ್ರಿ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ನ ಮಗ ದಾನೀಶ್

ದಾದ್ರಿ: ಗೋಮಾಂಸ ಸೇವನೆ ಶಂಕೆಯಿಂದಾಗಿ ದಾದ್ರಿಯ ಮುಸ್ಲಿಂ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ನ ಮಗ ದಾನೀಶ್ ನನ್ನು ನೊಯ್ಡಾ ಕೈಲಾಶ್ ಆಸ್ಪತ್ರೆಯಿಂದ ಸೇನಾ ಸಂಶೋಧನಾ ಆಸ್ಪತ್ರೆಗೆ ಶನಿವಾರ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ದಾದ್ರಿ ಘಟನೆ ನಡೆಯುವ ವೇಳೆ ಮೃತ ಅಖ್ಲಾಕ್ ನೊಂದಿಗೆ ಆತನ ಮಗ ದಾನೀಶ್ ಮೇಲೂ ಸಹ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ದಾನೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ದಾನೀಶ್ ನನ್ನು ನೊಯ್ಡಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ದಾನೀಶ್ ದಾಖಲಾಗಿದ್ದ ಆಸ್ಪತ್ರೆ ಬಿಜೆಪಿ ನಾಯಕ ಮಹೇಶ್ ಶರ್ಮಾಗೆ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ದಾನೀಶ್ ಪರಿಸ್ಥಿತಿ ಸುಧಾರಿಸಿರುವುದರಿಂದ ಸೇನಾ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದಾನೀಶ್ ಆರೋಗ್ಯ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಕುಟುಂಬಸ್ಥರ ಸಹಾಯದಿಂದ ಓಡಾಡಲು ಪ್ರಯತ್ನ ಮಾಡುತ್ತಿರುವ ದಾನೀಶ್ ಇದೀಗ ಜನರನ್ನು ಗುರ್ತಿಸುತ್ತಿದ್ದಾರೆ. ವೈದ್ಯರ ಸಲಹೆಯಂತೆ ಆಹಾರ, ನೀರು ಸೇವನೆ ಮಾಡುತ್ತಿದ್ದಾರೆ ಎಂದು ಮೃತ ಅಖ್ಲಾಕ್ ನ ಅಣ್ಣನ ಮಗ ಇರ್ಫಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com