ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರ್ಗಿ, ದಾದ್ರಿ ಹತ್ಯೆಗೆ ಸಿಡಿದ ಸಾಹಿತ್ಯ ವಲಯ

ದಾದ್ರಿ ಘಟನೆ, ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಸೇರಿದಂತೆ ದೇಶದಲ್ಲಾಗುತ್ತಿ ರುವ ಬೆಳವಣಿಗೆಗಳಿಂದ ಬೇಸತ್ತು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವವರ ಪಟ್ಟಿ ಬೆಳೆಯತೊಡಗಿದೆ...
Published on

ತಿರುವನಂತಪುರ: ದಾದ್ರಿ ಘಟನೆ, ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಸೇರಿದಂತೆ ದೇಶದಲ್ಲಾಗುತ್ತಿ ರುವ ಬೆಳವಣಿಗೆಗಳಿಂದ ಬೇಸತ್ತು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವವರ ಪಟ್ಟಿ ಬೆಳೆಯತೊಡಗಿದೆ.

ರಾಷ್ಟ್ರವ್ಯಾಪಿ ಹಲವಾರು ಸಾಹಿತಿಗಳು, ಲೇಖಕರು ಈ ವಿಚಾರದಲ್ಲಿ ಧ್ವನಿಯೆತ್ತಲು ಆರಂಬಿsಸಿದ್ದು, ಸಾಹಿತ್ಯ ವಲ ಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಲೇಖಕರಾದ ಉದಯಪ್ರಕಾಶ್, ನಯ ನತಾರಾ ಸೆಹಗಲ್, ಅಶೋಕ್ ವಾಜಪೇಯಿ ಅವರ ಬಳಿಕ ಈಗ ಮಲಯಾಳಂನ ಖ್ಯಾತ ಕಾದಂಬರಿಗಾರ್ತಿ ಸಾರಾ ಜೋಸೆಫ್ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಕಲಬುರ್ಗಿ ಹತ್ಯೆ ಸೇರಿದಂತೆ ಲೇಖಕ ಸಮುದಾಯದ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ಕವಿ ಕೆ. ಸಚ್ಚಿದಾ ನಂದನ್, ಸಣ್ಣಕಥೆಗಾರ ಪಿ.ಕೆ. ಪಾರಕ್ಕದವು ಶನಿವಾರ ಅಕಾಡೆಮಿ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಭಯಭೀತ ವಾತಾವರಣ: ಶನಿವಾರ ತ್ರಿಶೂರ್ ನಲ್ಲಿ ಮಾತನಾಡಿದ ಲೇಖಕಿ ಸಾರಾ ಜೋಸೆಫ್, ``ಎಂ ಎಂ ಕಲಬುರ್ಗಿ ಸೇರಿದಂತೆ ಮೂವರು ಲೇಖಕರು, ವಿಚಾರವಾದಿಗಳನ್ನು ಕೊಲೆ ಮಾಡಲಾಗಿದೆ. ಕೆ.ಎಸ್. ಭಗವಾನ್ ಅವರಿಗೆ ಕೋಮುಶಕ್ತಿಗಳು ಬೆದರಿಕೆ ಹಾಕುತ್ತಿವೆ. ಆದರೆ, ಲೇಖಕರು, ಹೋರಾಟಗಾರರಲ್ಲಿ ಹೆಚ್ಚುತ್ತಿರುವ ಭಯವನ್ನು ನಿವಾರಿಸು ವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತೂ, ಎಲ್ಲ ವಲಯಗಳಲ್ಲೂ ಅಪಾಯ ಕಾರಿ ಸ್ಥಿತಿ ಸೃಷ್ಟಿಯಾಗಿದೆ'' ಎಂದಿದ್ದಾರೆ. ಜತೆಗೆ, ಶೀಘ್ರವೇ ತಾವು ಕೊರಿಯರ್ ಮೂಲಕ ತನ್ನ ಪ್ರಶಸ್ತಿ ಫಲಕ ಮತ್ತು ನಗ ದನ್ನು ವಾಪಸ್ ಮಾಡುವುದಾಗಿಯೂ ಹೇಳಿದ್ದಾರೆ.

ಸಚ್ಚಿದಾನಂದ, ಪಾರಕ್ಕದವು ರಾಜಿನಾಮೆ: ಈ ನಡುವೆ, ಖ್ಯಾತ ಕವಿ ಸಚ್ಚಿದಾನಂದನ್ ಅವರು ಸಾಹಿತ್ಯ ಅಕಾಡೆಮಿಯ ಎಲ್ಲ ಸಮಿತಿಗಳಿಗೂ ರಾಜಿನಾಮೆ ಸಲ್ಲಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಹಾಗೂ ಲೇಖಕರ ಪರವಾಗಿ ನಿಲ್ಲುವಲ್ಲಿ ಅಕಾಡೆಮಿ ವಿಫಲವಾಗಿದೆ. ಎಂ ಎಂ ಕಲಬುರ್ಗಿ ಅವರ ಹತ್ಯೆಯಾದಾಗಲೇ ನಾನು, ಇದನ್ನು ಖಂಡಿಸಿ ನಿರ್ಣಯವೊಂದನ್ನು ಅಂಗೀಕರಿಸುವಂತೆ ಅಕಾಡೆಮಿಗೆ ಪತ್ರ ಬರೆದಿದ್ದೆ. ಆದರೆ, ಬೆಂಗಳೂರಿನಲ್ಲಿ ಸಂತಾಪ ಸಭೆ ಏರ್ಪಡಿಸಲಾಯಿತೇ ವಿನಾ ನಿರ್ಣಯ ಅಂಗೀಕಾರವಾಗಲಿಲ್ಲ ಎಂದಿದ್ದಾರೆ.

ಸಾಹಿತಿ ಪಾರಕ್ಕದವು ಅವರೂ ರಾಜಿ ನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಪರವಿರೋಧ: ಇದೇ ವೇಳೆ, ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವ ಬಗ್ಗೆ ಪರವಿರೋಧ ಚರ್ಚೆಯೂ ಆರಂಭವಾ ಗಿದೆ. ಜ್ಞಾನಪೀಠ ಪುರಸ್ಕೃತ ಎಂ.ಟಿ. ವಾಸು ದೇವನ್ ನಾಯರ್, ಲೇಖಕರಾದ ಸುಗತಾ ಕುಮಾರಿ, ಯು.ಎ.ಖಾದರ್, ಕಾದಂ ಬರಿಗಾರ್ತಿ ಪಿ. ವಲ್ಸಲಾ ಅವರು ಪ್ರಶಸ್ತಿ
ಹಿಂತಿರುಗಿಸುವುದನ್ನು ವಿರೋಧಿಸಿದ್ದು, ತಾವ್ಯಾರೂ ಪ್ರಶಸ್ತಿ ವಾಪಸ್ ಮಾಡಲ್ಲ ಎಂದಿದ್ದಾರೆ. ಕಳೆದ ವರ್ಷ ಪ್ರಶಸ್ತಿ ಗಳಿಸಿದ್ದ ಲೇಖಕ ಸುಭಾಷ್ಚಂದ್ರನ್ ಅವರು, ಪ್ರಶಸ್ತಿ ಹಿಂದಿರುಗಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇನೆ ಎಂದಿದ್ದಾರೆ. ಈ ನಡುವೆ, ಪಿ. ವಲ್ಸಲಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ``ಕೆಲವರು ಪ್ರಶಸ್ತಿ ಗಾಗಿ ನಿಜಕ್ಕೂ ಆಯ್ಕೆಯಾಗಿರುತ್ತಾರೆ. ಇನ್ನು ಕೆಲವರು ಹಣ ಕೊಟ್ಟು ಖರೀದಿಸಿರುತ್ತಾರೆ. ಯಾರ್ಯಾರು ಹಣ ಕೊಟ್ಟು ಖರೀದಿಸಿದ್ದಾರೋ, ಅವರೆಲ್ಲ ಈಗ ಪ್ರಶಸ್ತಿ ವಾಪಸ್ ನೀಡುತ್ತಿದ್ದಾರೆ'' ಎಂದಿದ್ದಾರೆ.


ಪ್ರಶಸ್ತಿ ಹಿಂದಕ್ಕೆ ನೀಡಿದವರ್ಯಾರು?

  • ಉದಯಪ್ರಕಾಶ್
  • ನಯನತಾರಾ ಸೆಹಗಲ್
  • ಅಶೋಕ್ ವಾಜಪೇಯಿ
  • ರೆಹಮಾನ್ ಅಬ್ಬಾಸ್
  • ಸಾರಾ ಜೋಸೆಫ್
  • ಕೆ. ಸಚ್ಚಿದಾನಂದನ್(ರಾಜಿನಾಮೆ)
  • ಪಿ.ಕೆ. ಪಾರಕ್ಕದವು(ರಾಜಿನಾಮೆ)
ಕರ್ನಾಟಕದವರು
  • ಚಂದ್ರಶೇಖರ ಪಾಟೀಲ್
  • ಚಿದಾನಂದ ಸಾಲಿ
  • ಸಂಗಮೇಶ ಮೆಣಸಿನ ಕಾಯಿ
  • ಹನುಮಂತ ಹಾಲಿಗೇರಿ
  • ಸತೀಶ್ ಜವರೇಗೌಡ
  • ಶ್ರೀದೇವಿ ಆಲೂರು
  • ವೀರಣ್ಣ ಮಡಿವಾಳರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com