ಉಗ್ರರ ದುಷ್ಕೃತ್ಯದ ಬಗ್ಗೆ ಆಟೋ ಚಾಲಕ ಮಾಹಿತಿ: ಮುಂಬೈ ನಲ್ಲಿ ಹೈ ಅಲರ್ಟ್

ಮುಂಬೈನ ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬೈ ನಗರದಲ್ಲಿ ಸೋಮವಾರ ಹೈ ಅಲರ್ಟ್ ಘೋಷಿಸಲಾಗಿದೆ...
ಶಂಕಿತ ಉಗ್ರರ ಚಿತ್ರ  (ಫೋಟೋ ಕೃಪೆ: ಮಿಡ್ ಡೇ.ಕಾಂ)
ಶಂಕಿತ ಉಗ್ರರ ಚಿತ್ರ (ಫೋಟೋ ಕೃಪೆ: ಮಿಡ್ ಡೇ.ಕಾಂ)
Updated on: 

ಮುಂಬೈ: ಮುಂಬೈನ ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬೈ ನಗರದಲ್ಲಿ ಸೋಮವಾರ ಹೈ ಅಲರ್ಟ್ ಘೋಷಿಸಲಾಗಿದೆ.

ಸಿಯೋನ್ ಫ್ಲೈ ಓವರ್ ಸಮೀಪ ಮೂವರು ನನ್ನ ಆಟೋ ಹತ್ತಿದರು. ಈ ವೇಳೆ ಮೂವರು ವಿಧ್ವಂಸಕ ಕೃತ್ಯದ ಬಗ್ಗೆ ಮಾತನಾಡುತ್ತಿದ್ದರು. ಮೂವರಲ್ಲಿ ಇಬ್ಬರು ಹಿಂದೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ಒಬ್ಬ ಮಾತ್ರ ಹಿಂದೆಯಲ್ಲಿ ಮಾತನಾಡಲು ಕಷ್ಟ ಪಡುತ್ತಿದ್ದ. ಸಂಭಾಷಣೆ ವೇಳೆ ವ್ಯಕ್ತಿಯೊಬ್ಬ ಮುಂಬೈ ಸ್ಪೋಟದ ಉಗ್ರ ಕಸಬ್ ಕುರಿತಂತೆ ಮಾತನಾಡುತ್ತಿದ್ದ. ಈ ಯೋಜನೆ ಯಶಸ್ವಿಯಾದ ನಂತರ ನನ್ನನ್ನು ಮತ್ತು ನನ್ನ ಕುಟುಂಬವನ್ನು ನೋಡುವವರಾರು ಎಂದು ಹೇಳುತ್ತಿದ್ದ. ಇದಕ್ಕುತ್ತರಿಸಿದ ಮತ್ತೊಬ್ಬ ವ್ಯಕ್ತಿ ಚಿಂತಿಸಬೇಡ. ನಮಗೆ ನಮ್ಮ ಬಾಸ್ ಇದ್ದಾರೆ. ಕಸಬ್ ಕುಟುಂಬವನ್ನು ನೋಡು. ಅವರು ಈಗ ಹೇಗಿದ್ದಾರೆ. ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ.

ಇದಲ್ಲದೆ, ಮುಂಬೈ ನಗರಕ್ಕೆ ಹೊಸದಾಗಿ ಬಂದಿರುವಂತೆ ಎಲ್ಲಾ ರಸ್ತೆಗಳ ಕುರಿತಂತೆ ನಿರಂತರವಾಗಿ ನನ್ನನ್ನು ಮಾಹಿತಿ ಕೇಳುತ್ತಿದ್ದರು. ಅಲ್ಲದೆ, ನಿರಂತರವಾಗಿ ಫೋನಿನ ಮೂಲಕ ಸಂಭಾಷಣೆಯಲ್ಲಿ ತೊಡಗಿದ್ದರು. ಮೂವರು ಐಱೋಲಿ ಟೋಲ್ ನಾಕಾ ಸಮೀಪದಲ್ಲಿ ಕೆಳಗಿಳಿದರು. ನಂತರ ಮತ್ತೊಂದು ಆಟೋವನ್ನು ಹತ್ತಿಕೊಂಡರು. ಈವೇಳೆ ಆ ಆಟೋ ನಂಬರ್ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪ್ರಕರಣ ಕುರಿತಂತೆ ಈಗಾಗಲೇ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಮಂಗಳವಾರ ಮುಂಬೈಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಮುಂಬೈನಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿಗಳು ಈ ಮೊದಲೇ ಮೂಲಗಳಿಂದ ತಿಳಿದುಬಂದಿದೆ. ಇದೀಗ ಆಟೋ ಚಾಲಕ ನೀಡಿರುವ ಮಾಹಿತಿ ಅನ್ವಯ ಮುಂಬೈ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಟೋ ಚಾಲಕ ನೀಡಿದ ಕೆಲವು ಮಾಹಿತಿ ಅನ್ವಯ ಇದೀಗ ಶಂಕಿತ ಉಗ್ರರ ಚಿತ್ರವನ್ನು ಬಿಡಿಸಲಾಗಿದ್ದು, ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದೀಗ ಶಂಕಿತ ಉಗ್ರರ ಚಿತ್ರವನ್ನು ಮುಂಬೈನಾದ್ಯಂತ ಹಂಚಿಕೆ ಮಾಡಲಾಗಿದ್ದು, ಉಗ್ರರ ಬಗ್ಗೆ ಮಾಹಿತಿ ತಿಳಿಯಲು ತಾಂತ್ರಿಕ ಸಹಾಯ ಕೇಳಲಾಗಿದೆ. ಅಲ್ಲದೆ, ಉಗ್ರರು ಚಲಿಸದ ರಸ್ತೆಗಳಲ್ಲಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com