ತಂಬಾಕು ಬಿಡಿಸಲು ಮೊಬೈಲ್ ಪಾಠ

ತಂಬಾಕು ವ್ಯಸನ ಬಿಡಿಸಲು ದೆಹಲಿ ಸರ್ಕಾರ ಎಂ- ಸಸೆಷನ್ ಎಂಬ ಮೊಬೈಲ್ ಜಾಗೃತಿ ಅಭಿಯಾನ ಆರಂಭಿಸಲಿದೆ. ತಂಬಾಕು ಚಟ ಬಿಡಬೇಕೆಂಬ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತಂಬಾಕು ವ್ಯಸನ ಬಿಡಿಸಲು ದೆಹಲಿ ಸರ್ಕಾರ ಎಂ- ಸಸೆಷನ್ ಎಂಬ ಮೊಬೈಲ್  ಜಾಗೃತಿ ಅಭಿಯಾನ ಆರಂಭಿಸಲಿದೆ. ತಂಬಾಕು ಚಟ ಬಿಡಬೇಕೆಂಬ ಮನಸಿದ್ದರೂ ಮಾರ್ಗ ಸಿಗದೇ ಒದ್ದಾಡುತ್ತಿರುವವರಿಗೆ ಸಹಾಯ ಮಾಡಲೆಂದೇ ಹೊಸ ಯೋಜನೆ ರೂಪಿಸಿರುವ ಸರ್ಕಾರದ ಆರೋಗ್ಯ ಇಲಾಖೆ ಮೊಬೈಲ್ ಸಂದೇಶಗಳ ಮೂಲಕ ವ್ಯಸನಿಗಳ ಕೌನ್ಸೆಲಿಂಗ್ ಮಾಡಲಿದೆ. ಎಂ- ಸಸೆಷನ್ (ಮೊಬೈಲ್  ಸಸೆಷನ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮಾಡಬೇಕಾಗಿದ್ದಿಷ್ಟೇ. ಸರ್ಕಾರ ನೀಡುವ ಒಂದು ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಆಗ ಎಸ್ಸೆಮ್ಮೆಸ್ ಮೂಲಕ ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದು, ನಿಮ್ಮ ವ್ಯಸನ ಶುರುವಾಗಿದ್ದು, ಬಿಡಬೇಕೆನಿಸಿದ್ದು ಯಾವಾಗ ಎಂಬೆಲ್ಲ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಒಮ್ಮೆ ವಿವರ ಪಡೆದ ನಂತರ ತಂಬಾಕು
ವ್ಯಸನಿಗಳಿಗೆ ಪ್ರತಿ ದಿನ ನಾಲ್ಕೈದು ಸಂದೇಶಗಳು ಬರಲಾರಂಭಿಸುತ್ತವೆ. ಆ ಸಂದೇಶಗಳಲ್ಲಿ ಚಟ ಬಿಡಲು ಪ್ರೇರೇಪಿಸುವ ವಿಷಯಗಳಿರುತ್ತವೆ. ಈ ಕಾರ್ಯಕ್ರಮದ ಮೂಲಕ ಅವರ ಮನೋಸ್ಥೈರ್ಯ ಹೆಚ್ಚಿಸಿ ವ್ಯಸನ ಬಿಡಿಸುವ ಉದ್ದೇಶ ಸರ್ಕಾರದ್ದು ಎನ್ನುವ ಅರೋರಾ, ಈ ಕಾಲದಲ್ಲಿ ಮೊಬೈಲ್ ಹೊಂದಿರದ ವ್ಯಕ್ತಿಗಳೇ ಇಲ್ಲ. ಹಾಗಾಗಿ ಈ ಮಾಧ್ಯಮದ ಮೂಲಕ ಸಂದೇಶ ರವಾನಿಸುವುದು ಉತ್ತಮ ಎಂದು ಎಂ- ಸಸೆಷನ್ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ. ಶೀಘ್ರದಲ್ಲೇ  ನೋಂದಣಿಗೊಳ್ಳಲು ಇಚ್ಛಿಸುವವರಿಗಾಗಿ ಟೋಲ್  ಫ್ರೀ ನಂಬರ್ ಪ್ರಕಟಿಸಲಿದೆ. ಅತಿ ಹೆಚ್ಚು ತಂಬಾಕು ವ್ಯಸನಿಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿದೆ. 2020ರಲ್ಲಿ ಈ ಸಂಖ್ಯೆಯನ್ನು ಶೇ.20ರಷ್ಟು ಹಾಗೂ 2025ರಲ್ಲಿ ಶೇ.30ರಷ್ಟುಇಳಿಸುವ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರಕಟಿಸಲು ಆದೇಶಿಸಿದೆ.
ಹೀಗೊಂದು ಐಡಿಯಾ
-ತಂಬಾಕು ವ್ಯಸನ ಬಿಡಲು ಮೊಬೈಲ್ ಮೂಲಕ ಆಪ್ತಸಮಾಲೋಚನೆ
-ಟೋಲ್‍ ಫ್ರೀ ಸಂಖ್ಯೆ ಶೀಘ್ರ ಪ್ರಕಟ,ಜಾಹೀರಾತು ಮೂಲಕ ಪ್ರಚಾರ
- ಮೊಬೈಲ್ ಫೋನ್‍ನ ವ್ಯಾಪ್ತಿವಿಸ್ತಾರದ ಪ್ರಯೋಜನ ಪಡೆಯುವ ಆಲೋಚನೆ
-ಪ್ರತಿದಿನ ನಾಲ್ಕೈದು ಸಂದೇಶಗಳ ಮೂಲಕ ವ್ಯಸನದ ವಿರುದ್ಧ ಜಾಗೃತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com