ವಾಯುದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಸತ್ತಿಲ್ಲ

ಇರಾಕ್ ಅನ್ನು ಪೀಡಿಸುತ್ತಿರುವ ಇಸಿಸ್ ಎಂಬ ಪೈಶಾಚಿಕ ಉಗ್ರ ಸಂಘಟನೆಯನ್ನು ತೊಡೆದು ಹಾಕಲು ಅಮೆರಿಕ ನೇತೃತ್ವದ ಸೇನಾಪಡೆಗಳು ಭಾನುವಾರ...
ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ (ಸಂಗ್ರಹ ಚಿತ್ರ)
ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ (ಸಂಗ್ರಹ ಚಿತ್ರ)
ಬಾಗ್ದಾದ್: ಇರಾಕ್ ಅನ್ನು ಪೀಡಿಸುತ್ತಿರುವ ಇಸಿಸ್ ಎಂಬ ಪೈಶಾಚಿಕ ಉಗ್ರ ಸಂಘಟನೆಯನ್ನು ತೊಡೆದು ಹಾಕಲು ಅಮೆರಿಕ ನೇತೃತ್ವದ ಸೇನಾಪಡೆಗಳು ಭಾನುವಾರ ನಡೆಸಿದ  ವಾಯುದಾಳಿಯಲ್ಲಿ ಇಸ್ಲಾಮಿಕ್ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ.

ನಿನ್ನೆ ನಡೆದ ವಾಯುದಾಳಿಯಲ್ಲಿ ಇಸಿನ ವಿವಿಧ ಕ್ಯಾಂಪ್ ಗಳಲ್ಲಿದ್ದ ಒಟ್ಟು ಎಂಟು ಮಂದಿ ಮುಖ್ಯಸ್ಥರು ಸಾವನ್ನಪ್ಪಿದ್ದರು. ಇದರಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಕೂಡ ಸೇರಿದ್ದಾನೆ  ಎಂದು ಹೇಳಲಾಗುತ್ತಿತ್ತು. ಆದರೆ ಬಳಿಕ ಬಂದ ವರ್ತಮಾನಗಳ ಪ್ರಕಾರ ಅಬೂಬಕರ್ ಅಲ್ ಬಾಗ್ದಾದಿ ವಾಯುದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇರಾಕ್ ಸೇನೆ ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ಭಾನುವಾರ ಅಮೆರಿಕ ಸೇನಾ ಪಡೆಯು ಐಸಿಸ್ ಮುಖ್ಯಸ್ಥ ಬಾಗ್ದಾದಿಯನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಪಶ್ಚಿಮ ಇರಾಕ್‌ನಲ್ಲಿ  ಇಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ನಡೆಸುತ್ತಿದ್ದ ಎಂದು ಹೇಳಲಾಗಿದ್ದ ಇಸಿಸ್ ಸಭೆ ಮೇಲೆ ಸೇನಾಪಡೆ ದಾಳಿ ನಡೆಸಿತ್ತು. ಆದರೆ ಈ ದಾಳಿಯಲ್ಲಿ ಬಾಗ್ದಾದಿ ಬೆಂಗಾವಲು  ಪಡೆಯವರೂ ಸೇರಿದಂತೆ, ಐಸಿಸ್‌ನ ಅನೇಕ ಪ್ರಮುಖ ಉಗ್ರರು ಹತರಾಗಿದ್ದಾರೆ. ದಾಳಿ ನಂತರ ಕಾರ್ಯಾಚರಣೆ ಮುಂದುವರೆಸಲಾಗಿದೆ. ಆದರೆ ಸ್ಥಳೀಯ ಆಸ್ಪತ್ರೆಗಳ ಮೂಲಗಳ ಪ್ರಕಾರ  ಬಾಗ್ದಾದಿಯ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎಂದು ಇರಾಕ್ ಸೇನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com