• Tag results for ಬಾಗ್ದಾದ್

ಮತ್ತೆ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ!

ಇರಾನ್ ಮತ್ತು ಅಮೆರಿಕದ ಸಂಘರ್ಷದ ಬೆನ್ನಲ್ಲೇ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿಯ ರಾಕೆಟ್ ದಾಳಿ ನಡೆದಿತ್ತು. ಇದೀಗ ಕೆಲ ತಿಂಗಳ ಬಳಿಕ ಮತ್ತೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಭಾನುವಾರ ಮುಂಜಾನೆ ರಾಕೆಟ್‌ಗಳು ಅಪ್ಪಳಿಸಿವೆ.

published on : 16th February 2020

ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ 3 ರಾಕೆಟ್‌

ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 21st January 2020

ಬಂಧನಕ್ಕೀಡಾದ ಇಸಿಸ್ ಉಗ್ರನ ರವಾನೆ ಮಾಡಲು ಹರ ಸಾಹಸ ಪಟ್ಟ ಭದ್ರತಾ ಪಡೆಗಳು!

ಇರಾಕ್ ನಲ್ಲಿ ಭದ್ರತಾ ಪಡೆಗಳ ನಿದ್ರೆಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ರವಾನೆ ಮಾಡಲು ಭದ್ರತಾ ಪಡೆಗಳು ಹರ ಸಾಹಸಪಟ್ಟಿವೆ.

published on : 19th January 2020

ಇರಾನ್-ಅಮೆರಿಕ ಸಂಘರ್ಷ: ಇರಾಕ್ ಮೇಲೆ ಮತ್ತೆ ರಾಕೆಟ್ ದಾಳಿ

ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ. 

published on : 9th January 2020

ಇರಾನ್ ಸೇನಾ ಕಮಾಂಡರ್ ಸೊಲೈಮಾನಿ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ, ಕನಿಷ್ಠ 35 ಸಾವು!

ಅಮೆರಿಕ ಸೇನೆಯ ಕ್ಷಿಪಣಿ ದಾಳಿಯಲ್ಲಿ ಮೃತರಾದ ಇರಾನ್ ಸೇನಾ ಕಮಾಂಡರ್ ಖಾಸಿಮ್ ಸೊಲೈಮಾನಿ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ವೇಳೆ ಭಾರಿ ಪ್ರಮಾಣದ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 7th January 2020

ಬಾಗ್ದಾದ್ ನ ಗ್ರೀನ್ ಜೋನ್, ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ

ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ...

published on : 5th January 2020

ಇರಾಕ್ ನಲ್ಲಿ ಹಿಂಸಾರೂಪಕ್ಕೆ ತಿರುಗಿದ ನಾಗರಿಕ ಪ್ರತಿಭಟನೆ, ಸಾವಿನ ಸಂಖ್ಯೆ 25ಕ್ಕೆ ಏರಿಕೆ!

ಉತ್ತರ ಇರಾಕ್ ನಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಇರಾಕ್ ಸೇನೆ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

published on : 29th November 2019

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ

ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್​ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಹೇಳಿದ್ದಾನೆ.

published on : 30th April 2019