ಇರಾಕ್ ನಲ್ಲಿ ಐಸಿಸ್ ಉಗ್ರರ ಭೀಕರ ದಾಳಿ; 13 ಮಂದಿ ಪೊಲೀಸರ ಸಾವು, ಹಲವರಿಗೆ ಗಾಯ
ಬಾಗ್ದಾದ್: ಇರಾಕ್ ನಲ್ಲಿ ಐಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಕನಿಷ್ಛ 13 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 'ಇರಾಕ್ನ ಉತ್ತರದ ಪ್ರದೇಶ ಕಿರ್ಕುಕ್ ಸಮೀಪದ ಚೆಕ್ಪಾಯಿಂಟ್ ಮೇಲೆ ಐಸಿಸ್ ಉಗ್ರರು (ISIS Group) ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 13 ಪೊಲೀಸರು ಹತರಾಗಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಇರಾಕ್ನ ವೈದ್ಯಕೀಯ ಮತ್ತು ಭದ್ರತಾ ಮೂಲಗಳು ಮಾಹಿತಿ ನೀಡಿದ್ದು, ಕಿರ್ಕುಕ್ ನಗರದ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 13 ಮಂದಿ ಪೊಲೀಸರು ಹತರಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇರಾಕ್ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಈ ದಾಳಿ, ಪ್ರಸಕ್ತ ವರ್ಷದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ದಾಳಿಯಾಗಿದೆ. ‘ಫೆಡರಲ್ ಪೊಲೀಸ್ ಚೆಕ್ ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸ್ಟೇಟ್‌ನ ಉಗ್ರರು ದಾಳಿ ನಡೆಸಿದ್ದಾರೆ. ಆದರೆ, ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಲ್ಲ ಎಂದು ಇರಾಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ