

ಪಣಜಿ: ಪಾಕಿಸ್ತಾನ ಅಕ್ರಮಿತ ಕಾಶ್ಮೀರ(ಪಿಒಕೆ)ದ ನಾಗರಿಕರ ಮೇಲಿನ ಪಾಕ್ ಸೇನೆಯ ದೌರ್ಜನ್ಯದ ಬಗ್ಗೆ ಕಾಶ್ಮೀರಿಗಳಿಗೆ ಅರಿವಿರಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.
ಪಾಕಿಸ್ತಾನ ಭಾರತದೊಳಗೆ ಉಗ್ರರನ್ನು ನುಸುಳಿಸುವ ಯತ್ನವನ್ನು ಮುಂದುವರೆಸಿದೆ ಎಂದು ಆರೋಪಿಸಿರುವ ರಕ್ಷಣಾ ಸಚಿವರು, ಪಶ್ಚಿಮ ನೆರೆ ರಾಷ್ಟ್ರದ ಈ ಕೃತ್ಯವನ್ನು ವಿಶ್ವವದ ಮುಂದೆ ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.
'ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೊಂದಿಗೆ ಪಾಕ್ ಸೇನೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಕಾಶ್ಮೀರಿಗಳು ಅರ್ಥ ಮಾಡಿಕೊಳ್ಳಬೇಕು. ಅವರು ತಾವು ಪಾಕಿಸ್ತಾನಿಗಳು ಅಂತ ಯಾವತ್ತು ಭಾವಿಸಿಲ್ಲ. ಅವರು ಸಹ ಭಾರತೀಯರೇ, ಹೀಗಾಗಿ ಅವರನ್ನು ಪಾಕ್ ಸೇನೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ' ಎಂದರು.