ಮಾಲೇಗಾಂವ್: ಒತ್ತಡ ತಂದಿದ್ದು ಸುಹಾಸ್ ವರ್ಕೆ ಎಂದ ಸಾಲಿಯಾನ್

ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ...
ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ (ಸಂಗ್ರಹ ಚಿತ್ರ)
ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ (ಸಂಗ್ರಹ ಚಿತ್ರ)

ನವದೆಹಲಿ: ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ.

ತಮ್ಮ ಬಳಿ ಬಂದು ಸೂಚನೆ ನೀಡಿದ್ದ ಅಧಿಕಾರಿ ಹೆಸರು ಸುಹಾಸ್ ವರ್ಕೆ ಎಂದು ಸಾಲಿಯಾನ್ ಮಂಗಳವಾರ ಘೋಷಿಸಿದ್ದಾರೆ. ಜತೆಗೆ, ಎನ್ಐಎ ಮುಖ್ಯಸ್ಥ ರನ್ನು ವಜಾ ಮಾಡುವಂತೆಯೂ  ಅವರು ಆಗ್ರಹಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಎನ್ಐಎ ಎಸ್ಪಿ ವರ್ಕೆ ಹೆಸರು ಬಹಿರಂಗಪಡಿಸಿದ್ದನ್ನು ಸಮರ್ಥಿಸಿಕೊಂಡಿರುವ ಸಾಲಿಯಾನ್, ``ಎನ್ಐಎ ಮುಖ್ಯಸ್ಥರನ್ನು  ವಜಾ ಮಾಡಬೇಕು. ರಕ್ಷಕನೇ ಭಕ್ಷಕನಾ ದಾಗ, ನಾವೇನನ್ನು ನಿರೀಕ್ಷಿಸಲು ಸಾಧ್ಯ?'' ಎಂದು ಪ್ರಶ್ನಿ ಸಿದರು. ಅಧಿಕಾರಿ ಹೆಸರನ್ನು  ನಮೂದಿಸಿರುವ ಅಫಿಡವಿಟ್ ಅನ್ನು 2 ತಿಂಗಳ ಹಿಂದೆಯೇ  ಸಲ್ಲಿಸಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವ ಈ ಬಗ್ಗೆ ಹೆಚ್ಚು ಮಾತನಾಡುವ ಹಾಗಿಲ್ಲ ಎಂದೂ ಅವರು ಹೇಳಿದರು. ಸೋಮವಾರವಷ್ಟೇ ವಿಶೇಷ ಎನ್ಐಎ ನ್ಯಾಯಾಲ ಯವು, ಪ್ರಸಾದ್  ಪುರೋಹಿತ್ ಸೇರಿದಂತೆ ಸ್ಫೋಟದ 3 ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com