ನೇತಾಜಿಯವರ ದಾಖಲೆಗಳನ್ನು ಇಂದೇ ಬಿಡುಗಡೆ ಮಾಡಿ: ಕಾಂಗ್ರೆಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಲು ಜನವರಿ 23ರಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಲು ಜನವರಿ 23ರಂದು ಯಾಕೆ ಬಿಡುಗಡೆ ಮಾಡಬೇಕು, ಇಂದೇ ಮಾಡಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ದಾಖಲೆಗಳನ್ನು ಬಿಡುಗಡೆ ಮಾಡಲು ಮುಂದಿನ ವರ್ಷ ಜನವರಿ 23ರವರೆಗೆ ಏಕೆ ಕಾಯಬೇಕು? ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದಲೇ? ಕೇಂದ್ರ ಸರ್ಕಾರ ಇಂದು ಅಥವಾ ನಾಳೆಯೇ ಬಿಡುಗಡೆ ಮಾಡಲಿ. ಕುತೂಹಲವನ್ನು ಬಹಳ ಸಮಯದವರೆಗೆ ಏಕೆ ಇಟ್ಟುಕೊಳ್ಳಬೇಕು? ಎಂದು ಕಾಂಗ್ರೆಸ್ ನ ಹಿರಿಯ ವಕ್ತಾರ ಆನಂದ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದ ಕ್ರಮ ನೋಡಿದರೆ ಪಶ್ಚಿಮ ಬಂಗಾಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಹೆಜ್ಜೆಯನ್ನಿಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಹಾರ ಜನತೆಯನ್ನು ಗುರಿಯಾಗಿಟ್ಟುಕೊಂಡು ಅವರ ಮನಸ್ಸನ್ನು ಗೆಲ್ಲುವ ರೀತಿ ಮಾತನಾಡಿದ್ದರು. ಅವರ ಕಾರ್ಯವಿಧಾನವೇ ಅಂತಹದ್ದು. ಅವರೊಬ್ಬ ಉತ್ತಮ ಕಾರ್ಯಕ್ರಮ ಸಂಘಟಕ ಎಂದು ವ್ಯಂಗ್ಯದಿಂದ ನುಡಿದರು.

ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಎಲ್ಲಾ ಸರ್ಕಾರಗಳು ನೇತಾಜಿಯವರ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ನಿನ್ನೆ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆನಂದ್ ಶರ್ಮ, ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಲೂ ದಾಖಲೆಗಳನ್ನು ಬಹಿರಂಗಪಡಿಸಬಾರದೆಂದು ನಿರ್ಧರಿಸಿದ್ದರು. ಮೋದಿಯವರು ಯಾವುದೇ ರೀತಿಯ ಪ್ರಚೋದಿತ ಆರೋಪಣೆ ನೀಡಿದ್ದರೆ ಅದು ವಾಜಪೇಯಿಯವರ ವಿರುದ್ಧವೂ ಆಗುತ್ತದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com