ಪೋಸ್ಟ್ ಮಾರ್ಟಂ ಮಾಡುವ ಮುನ್ನ ಎದ್ದು ಕುಳಿತಿದ್ದ ವ್ಯಕ್ತಿಯ ಸಾವು

ಪೋಸ್ಟ್‌ಮಾರ್ಟಂ ಗೆ ಮುನ್ನ ಎದ್ದು ಕುಳಿತು ಎಲ್ಲರನ್ನೂ ದಂಗುಪಡಿಸಿದ್ದ 50 ವರ್ಷದ ವ್ಯಕ್ತಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ....
ಮೃತ ವ್ಯಕ್ತಿ ಪ್ರಕಾಶ್
ಮೃತ ವ್ಯಕ್ತಿ ಪ್ರಕಾಶ್

ಮುಂಬಯಿ: ಪೋಸ್ಟ್‌ಮಾರ್ಟಂ ಗೆ ಮುನ್ನ ಎದ್ದು ಕುಳಿತು ಎಲ್ಲರನ್ನೂ ದಂಗುಪಡಿಸಿದ್ದ 50 ವರ್ಷದ ವ್ಯಕ್ತಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ.

ವ್ಯಕ್ತಿ ಸತ್ತಿದ್ದಾನೆಂದು ಮುಂಬಯಿ ಆಸ್ಪತ್ರೆ ವೈದ್ಯರು ಘೋಷಿಸಿದ ಬಳಿಕ ಆತನನ್ನು ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ  ಪೋಸ್ಟ್‌ಮಾರ್ಟಂ ಗೆ ಮುನ್ನ ಎದ್ದು ಕುಳಿತಿದ್ದ ವ್ಯಕ್ತಿಯನ್ನು ಪ್ರಕಾಶ್‌ ಎಂದು ಗುರುತಿಸಲಾಗಿತ್ತು.

ಎದ್ದು ಕುಳಿತ ಆತ ಜೀವಂತ ಇರುವುದನ್ನು ಗಮನಿಸಿ, ಆತನನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ರಾತ್ರಿ ಮೃತ ಪಟ್ಟ ಎಂದು ಸಯಾನ್‌ ಆಸ್ಪತ್ರೆ ಮೂಲಗಳು ಹೇಳಿವೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬಯಿಗೆ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೋಲೀಸ್ ಭದ್ರತೆ ಮಾಡಲಾಗಿತ್ತು. ನಗರದ ರಸ್ತೆಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಆಸ್ಪತ್ರೆಯ ಬಳಿ ಕಾವಲಿದ್ದ ಪೊಲೀಸರು  'ಪ್ರಕಾಶ್‌ "ಮೃತಪಟ್ಟಿರುವುದನ್ನು' ಗಮಿನಿಸಿ ಒಡನೆಯೇ ಆತನ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು.

ಸಯಾನ್‌ ಆಸ್ಪತ್ರೆಯ ಡೀನ್‌  ಡಾ. ಸುಲೇಮಾನ್‌ ಮರ್ಚಂಟ್‌  ಪ್ರಕಾರ, "ರೋಗಿಯನ್ನು ಸ್ಟ್ರೆಚರ್‌ ಮೇಲೆ ಆಸ್ಪತ್ರೆಗೆ ತರಲಾದಾಗ ಆತನ ಕಿವಿ ಮತ್ತು ಮುಖದಲ್ಲಿ ಹುಳುಗಳು ಹರಿದಾಡುತ್ತಿದ್ದವು. ಸಾಮಾನ್ಯವಾಗಿ ಈ ಬಗೆಯ ಲಕ್ಷಣ ಕೊಳೆವ ಸ್ಥಿತಿಗೆ ತಲುಪುವ ಮೃತ ದೇಹದಲ್ಲಿ ಕಂಡು ಬರುತ್ತದೆ. ಈ ರೋಗಿಯನ್ನು ಸಯಾನ್‌ ಬಸ್‌ ಸ್ಟಾಪ್‌ನಿಂದ ಇಲ್ಲಿಗೆ ತರಲಾಗಿತ್ತು. ಆರಂಭಿಕ ಹಂತದ ಪರೀಕ್ಷೆಯ ವೇಳೆ ರೋಗಿಯ ನಾಡಿ ಮಿಡಿತ, ಹೃದಯ ಬಡಿತ ಕಂಡುಬರಲಿಲ್ಲ. ಮೇಲಾಗಿ ಪೊಲೀಸರು ತಾವು "ಮೃತ ದೇಹ'ವೊಂದನ್ನು ಆಸ್ಪತ್ರೆಗೆ ತಂದಿರುವುದಾಗಿ ಹೇಳಿದ್ದರು. ಇದರಿಂದ ವೈದ್ಯರು ಪೊಲೀಸರ ಮಾತುಗಳನ್ನು ನಂಬಬೇಕಾಯಿತು. ಅಂತೆಯೇ ರೋಗಿಯು ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು'.

ಆದರೆ ಶವಾಗಾರದಲ್ಲಿ "ಮೃತ' ರೋಗಿಯಲ್ಲಿ ಇನ್ನೂ ಜೀವ ಇರುವುದು ಕಂಡು ಬಂದಿತು. ಒಡನೆಯೇ ಅವರು ವೈದ್ಯರಿಗೆ ತಿಳಿಸಿದರು. ರೋಗಿಯು ಇನ್ನೂ ಜೀವಂತ ಇರುವುದನ್ನು ಕಂಡ ವೈದ್ಯರು ಕೂಡಲೇ ಆತನನ್ನು ಐಸಿಯುಗೆ ಒಯ್ದರು. ಮಂಗಳವಾರ ರಾತ್ರಿ ಆ ರೋಗಿ ಮೃತಪಟ್ಟ' ಎಂದು ಡಾ. ಸುಲೇಮಾನ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com