ಎನ್‍ಜೆಎಸಿ ವ್ಯವಸ್ಥೆ ಅಸಂವಿಧಾನಿಕ, ಮಂಡಳಿ ವ್ಯವಸ್ಥೆ ಮುಂದುವರೆಯಲಿ: ಸುಪ್ರೀಂ

ನ್ಯಾಯಾಧೀಶರ ನೇಮಕಾತಿ ಆಯೋಗ ಮಂಡಳಿ ವ್ಯವಸ್ಥೆ ಬದಲಿಗೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‍ಜೆಎಸಿ)ವನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದ್ದ...
ನವದೆಹಲಿ: ನ್ಯಾಯಾಧೀಶರ ನೇಮಕಾತಿ ಆಯೋಗ ಮಂಡಳಿ ವ್ಯವಸ್ಥೆ ಬದಲಿಗೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‍ಜೆಎಸಿ)ವನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಎನ್‍ಜೆಎಸಿ ವ್ಯವಸ್ಥೆ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ಮಹತ್ವದ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ಸಂಬಂಧ
ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠ ತೀರ್ಪು ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಎನ್‍ಜೆಎಸಿ ಮೂಲಕ ನ್ಯಾಯಾಧೀಶರ ನೇಮಕ ಅಸಂವಿಧಾನಿಕವಾಗಿದೆ. ಹೀಗಾಗಿ ಎರಡು ದಶಕಗಳ ಹಳೆಯ ಮಂಡಳಿ ವ್ಯವಸ್ಥೆಯೇ ಮುಂದುವರಿಯಲಿ ಎಂದು ಹೇಳಿದೆ. 
ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್, ಜೆ. ಚಲಮೇಶ್ವರ್, ಎಂ.ಬಿ. ಲಾಕೂರ್, ಕುರಿಯನ್ ಜೋಸೆಫ್, ಆದರ್ಶ ಕುಮಾರ್ ಗೋಯಲ್ ಇದ್ದು, ಇವರು ಹೊಸ ವಿಚಾರಣೆಯುದ್ದಕ್ಕೂ ನೂತನ ನ್ಯಾಯಾಂಗ ನೇಮಕ ಆಯೋಗದ ಅಗತ್ಯತೆಯನ್ನು ಪ್ರಶ್ನಿಸುತ್ತಲೇ ಬಂದಿತ್ತು. ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.
ಮಂಡಳಿ ವ್ಯವಸ್ಥೆ ಬದಲಿಗೆ ಎನ್‍ಜೆಎಸಿ ಕಾಯ್ದೆಯನ್ನು ಅಸ್ತಿತ್ವಕ್ಕೆ ತರಲು ಕೇಂದ್ರ ಸರ್ಕಾರ ಮಸೂದೆಯನ್ನು ಅಂಗೀಕರಿಸಿತ್ತು. ಕೇಂದ್ರ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com