
ನವದೆಹಲಿ: ಯುದ್ಧ ವಿಮಾನಗಳಲ್ಲಿ, ಉಗ್ರರ ವಿರುದ್ಧದ ಹೋರಾಟದಲ್ಲಿ ಮಹಿಳಾ ಯೋಧರಿಗೂ ಅವಕಾಶ ಕಲ್ಪಿಸುವ ನಿರ್ಧಾರವನ್ನು ಸೇನೆ ಘೋಷಿಸಿದ ಬೆನ್ನಲ್ಲೇ, ಈಗ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕೂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.
ಶೀಘ್ರದಲ್ಲೇ ವಿವಿಐಪಿ(ಅತಿ ಗಣ್ಯರು) ಭದ್ರತೆಗೂ ಮಹಿಳಾ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಎನ್‌ಎಸ್‌ಜಿ ಡಿಜಿ ರಮೇಶ್‌ಚಂದ್ರ ತಾಯಲ್ ಘೋಷಿಸಿದ್ದಾರೆ. ಮಹಿಳಾ ಕಮಾಂಡೋಗಳು ಕೂಡ ಅತಿ ಗಣ್ಯರ ಭದ್ರತೆಗೆ ಸಮರ್ಥರಾಗಿದ್ದಾರೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ, ಪುರುಷ ಕಮಾಂಡೋಗಳಂತೆಯೇ ಮಹಿಳೆಯರಿಗೂ ಕಠಿಣ ತರಬೇತಿಯ ಮಾನದಂಡವನ್ನು ಅನುಸರಿಸಲಾಗುವುದು ಎಂದೂ ತಾಯಲ್ ತಿಳಿಸಿದ್ದಾರೆ.
Advertisement