ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ

ಮತ್ತೆ ಅತ್ಯಾಚಾರದ ಗುಮ್ಮ ರಾಷ್ಟ್ರರಾಜಧಾನಿಯನ್ನು ನಡುಗಿಸಿದೆ. ನಾಲ್ಕು ವರ್ಷದ ಮಗುವಿನ ಮೇಲೆ ಭೀಕರ ಅತ್ಯಾಚಾರ ನಡೆದ ಒಂದು ವಾರದಲ್ಲೇ ದೆಹಲಿಯಲ್ಲಿ...
ಮಕ್ಕಳ ಮೇಲೆ ಅತ್ಯಾಚಾರ (ಸಾಂದರ್ಭಿಕ ಚಿತ್ರ)
ಮಕ್ಕಳ ಮೇಲೆ ಅತ್ಯಾಚಾರ (ಸಾಂದರ್ಭಿಕ ಚಿತ್ರ)

ನವದೆಹಲಿ: ಮತ್ತೆ ಅತ್ಯಾಚಾರದ ಗುಮ್ಮ ರಾಷ್ಟ್ರರಾಜಧಾನಿಯನ್ನು ನಡುಗಿಸಿದೆ. ನಾಲ್ಕು ವರ್ಷದ ಮಗುವಿನ ಮೇಲೆ ಭೀಕರ ಅತ್ಯಾಚಾರ ನಡೆದ ಒಂದು ವಾರದಲ್ಲೇ ದೆಹಲಿಯಲ್ಲಿ ಮತ್ತಿಬ್ಬರು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಮಕ್ಕಳೂ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಹರಿಸಿ ಅತ್ಯಾಚಾರ
ಮೊದಲ ಪ್ರಕರಣದಲ್ಲಿ, ಎರಡೂವರೆ ವರ್ಷದ ಮಗುವನ್ನು ಪಶ್ಚಿಮ ದೆಹಲಿಯಲ್ಲಿರುವ ಮನೆಯ ಹೊರಗಿಂದ ಅಪಹರಣ ಮಾಡಿದ ಇಬ್ಬರು ದುಷ್ಕರ್ಮಿಗಳು, ಬೈಕ್‌ನಲ್ಲಿ ಹೊತ್ತೊಯ್ದು ಅತ್ಯಾಚಾರ  ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ತೀವ್ರ ರಕ್ತಸ್ರಾವದಿಂದ ಪ್ರಜ್ಞೆತಪ್ಪಿ ಬಿದ್ದಿದ್ದ ಮಗು ಸಮೀಪದ ಪಾರ್ಕೊಂದರಲ್ಲಿ ಪತ್ತೆಯಾಗಿದೆ. ಮಗುವಿನ ಜನನಾಂಗಕ್ಕೆ ಗಂಭೀರ ಹಾನಿಯಾಗಿದ್ದು, ದೇಹದಲ್ಲಿ  ಕಚ್ಚಿದ ಗಾಯಗಳಿವೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಬಾಲಕಿಯ ಮನೆಯ ಸಮೀಪದ ಸಿಸಿಟಿವಿ  ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಇಬ್ಬರು ಬೈಕ್‌ನಲ್ಲಿ ಮಗುವನ್ನು ಕರೆದೊಯ್ದ ದೃಶ್ಯ ದಾಖಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

೫ ವರ್ಷದ ಮಗುವಿನ ಮೇಲೆ
ಮತ್ತೊಂದು ಪ್ರಕರಣದಲ್ಲಿ, ಪೂರ್ವ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ೫ವರ್ಷದ ಮಗುವಿನ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ನೆರೆಮನೆ ಯಾತ ಮಗುವನ್ನು ತನ್ನ ಮನೆಗೆ ಕರೆದೊಯ್ದು, ಗೆಳೆಯರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಮಗುವಿನ ಬಟ್ಟೆಯಲ್ಲಿ ರಕ್ತದ ಕಲೆಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಪೊಲೀಸರ ವರ್ತನೆಗೆ ಬೇಸತ್ತು ಬಾಲಕಿ ಆತ್ಮಹತ್ಯೆ

ಚುಡಾಯಿಸುವವರ ವಿರುದ್ಧ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಪೊಲೀಸರ ಬಗ್ಗೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. “ನೆರೆಮನೆಯ ಯುವಕರು ನನ್ನನ್ನು  ಚುಡಾಯಿಸುತ್ತಿದ್ದಾರೆ.

ಪ್ರಧಾನಿಯನ್ನೇಕೆ ದೂರುತ್ತೀರಿ: ಶೀಲಾ

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿರುವ ಕೇಜ್ರಿವಾಲ್ ವಿರುದ್ಧ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಹರಿಹಾಯ್ದಿದ್ದಾರೆ. “ರಾಜ್ಯದ ಆಡಳಿತವು ದೆಹಲಿ ಸರ್ಕಾರದಡಿ ಬರುತ್ತದೆ.   ಹೀಗಿರುವಾಗ ಪ್ರಧಾನಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಪೊಲೀಸ್ ವ್ಯವಸ್ಥೆಯನ್ನು ಎರಡಾಗಿ ವಿಭಾಗಿಸಿ, ಒಂದನ್ನು ವಿವಿಐಪಿ, ರಾಜತಾಂತ್ರಿಕರ ರಕ್ಷಣೆಗೆ, ಮತ್ತೊಂದನ್ನು ರಾಜ್ಯದ  ಕಾನೂನು ಸುವ್ಯವಸ್ಥೆ ಕಾಪಾಡಲು ಬಳಸಿಕೊಳ್ಳಿ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com