600 ಲೀಟರ್ ಮದ್ಯ ಕಳ್ಳಸಾಗಣೆ: ಬಿಎಸ್ಎಫ್ ಯೋಧ ಸೇರಿದಂತೆ ನಾಲ್ವರ ಬಂಧನ

ಅಕ್ರಮ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ನ ಯೋಧ ಹಾಗು ಇನ್ನೂ ಮೂವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಮದ್ಯ ಕಳ್ಳಸಾಗಣೆ(ಸಂಗ್ರಹ ಚಿತ್ರ)
ಮದ್ಯ ಕಳ್ಳಸಾಗಣೆ(ಸಂಗ್ರಹ ಚಿತ್ರ)

ಭುವನೇಶ್ವರ್:ಅಕ್ರಮ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ನ ಯೋಧ ಹಾಗು ಇನ್ನೂ ಮೂವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಬಿಎಸ್ ಎಫ್ ನ ಯೋಧ ಸುಶಾಂತ್ ಕುಮಾರ್ ಹಾಗೂ ಇನ್ನೂ ಮೂವರು ಸ್ಥಳೀಯ ವ್ಯಕ್ತಿಗಳನ್ನು ಅಬಕಾರಿ ತಂಡ ಬಂಧಿಸಿದೆ. ಬಂಧಿತರಿಂದ 600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಚಂದ್ರ ಭಂಜ ಹೇಳಿದ್ದಾರೆ.
ಐಎಂಎಫ್ಎಲ್ ನ 800 ಕ್ಕೂ ಹೆಚ್ಚು ಬಾಟಲ್ ಗಳಿದ್ದವು. ಖಾನಾಪರದಿಂದ ಅಸ್ಸಾಂ ಮೇಘಾಲಯ ಗಡಿ ಮೂಲಕ ಬಿಎಸ್ಎಫ್ ಯೋಧ ಮದ್ಯ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. ಗಂಜಾಂ ಗೆ ತೆರಳುವ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 
ಬಂಧಿತ ಸುಶಾಂತ್ 5 ವರ್ಷಗಳ ಕಾಲ ಮೇಘಾಲದಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಒಡಿಶಾಗೆ ವರ್ಗಾವಣೆ ಮಾಡಲಾಗಿತ್ತು. ಅಕ್ರಮವಾಗಿ ಮದ್ಯ ಸಾಗಣೆ ಮಾಡುವುದರಿಂದ ಪ್ರತಿ ಬಾಟಲ್ ಗೆ 300 ರೂಪಾಯಿ ಲಾಭ ಬರುತ್ತಿತ್ತು ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com