ಶಾಲೆಗಳ ಬಳಿ ಕುರುಕುಲು ತಿಂಡಿ ಮಾರಾಟ ಬೇಡ

ಶಾಲೆಗಳಿಂದ ೫೦ ಮೀಟರ್ ಸುತ್ತಳತೆಯಲ್ಲಿ ಕುರುಕಲು ತಿಂಡಿಗಳೊಂದಿಗೆ ನೂಡಲ್ಸ್, ಚಿಪ್ಸ್, ಕಾರ್ಬೋನೆಟ್ ಪಾನೀಯಗಳ ಮಾರಾಟಕ್ಕೆ ನಿರ್ಬಂಧ ಹೇರಲು ಆಹಾರ ಗುಣಮಟ್ಟ ಮತ್ತು ನಿಯಂತ್ರಣ ಪ್ರಾಧಿಕಾರ ಪ್ರಸ್ತಾಪಿಸಿದೆ...
ಶಾಲಾ ಪ್ರದೇಶದಲ್ಲಿ ಕುರುಕಲು ತಿಂಡಿ ನಿಷೇಧ (ಸಂಗ್ರಹ ಚಿತ್ರ)
ಶಾಲಾ ಪ್ರದೇಶದಲ್ಲಿ ಕುರುಕಲು ತಿಂಡಿ ನಿಷೇಧ (ಸಂಗ್ರಹ ಚಿತ್ರ)

ನವದೆಹಲಿ: ಶಾಲೆಗಳಿಂದ ೫೦ ಮೀಟರ್ ಸುತ್ತಳತೆಯಲ್ಲಿ ಕುರುಕಲು ತಿಂಡಿಗಳೊಂದಿಗೆ ನೂಡಲ್ಸ್, ಚಿಪ್ಸ್, ಕಾರ್ಬೋನೆಟ್ ಪಾನೀಯಗಳ ಮಾರಾಟಕ್ಕೆ ನಿರ್ಬಂಧ ಹೇರಲು ಆಹಾರ ಗುಣಮಟ್ಟ  ಮತ್ತು ನಿಯಂತ್ರಣ ಪ್ರಾಧಿಕಾರ ಪ್ರಸ್ತಾಪಿಸಿದೆ.

ಮಕ್ಕಳಿಗೆ ಆರೋಗ್ಯಕರ, ಪೌಷ್ಟಿಕ ಆಹಾರ ನೀಡುವ ಕರಡು ಮಾರ್ಗಸೂಚಿ ನೀಡಿದೆ. ಏನನ್ನು ತಿನ್ನಬೇಕು ಎನ್ನುವುದಕ್ಕೆ ಮಕ್ಕಳೇ ನಿರ್ಧಾರ ಮಾಡುವ ಪ್ರೌಢಿಮೆ ಅವರಲ್ಲಿ ಬಂದಿಲ್ಲ ಎಂದಿದೆ.  ಶಾಲಾ ಆವರಣದಲ್ಲಿ ಕೊಬ್ಬಿನ, ಉಪ್ಪು, ಸಕ್ಕರೆ ತಿನಿಸು ಮಾರುವುದು ಒಳಿತಲ್ಲ ಎಂದಿದೆ. ಶಾಲೆಗಳಲ್ಲಿ ಕ್ಯಾಂಟೀನ್ ಮಾಡಿ ಕೊಂಡು ಉತ್ತಮ ಆಹಾರ ನೀಡಲು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com