ಮೂವರು ಸಾಹಿತಿಗಳಿಂದ ಪ್ರಶಸ್ತಿ ವಾಪಸ್

ಹಿರಿಯ ವಿಮರ್ಶಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ, ದಾದ್ರಿ ಘಟನೆ ಖಂಡಿಸಿ ಭಾನುವಾರ ರಾಷ್ಟ್ರಮಟ್ಟದಲ್ಲಿ ಇನ್ನೂ ಇಬ್ಬರು ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ...
ಉರ್ದು ಸಾಹಿತಿ ಮುನಾವರ್ ರಾಣಾ (ಸಂಗ್ರಹ ಚಿತ್ರ)
ಉರ್ದು ಸಾಹಿತಿ ಮುನಾವರ್ ರಾಣಾ (ಸಂಗ್ರಹ ಚಿತ್ರ)

ವಾರಂಗಲ್: ಹಿರಿಯ ವಿಮರ್ಶಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ, ದಾದ್ರಿ ಘಟನೆ ಖಂಡಿಸಿ ಭಾನುವಾರ ರಾಷ್ಟ್ರಮಟ್ಟದಲ್ಲಿ ಇನ್ನೂ ಇಬ್ಬರು ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ.

ಖ್ಯಾತ ಉರ್ದು ಲೇಖಕ ಮುನಾವರ್ ರಾಣಾ ಸುದ್ದಿವಾಹಿನಿಯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಶಸ್ತಿ ಹಿಂತಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಜತೆಗೆ ಇನ್ನು ಮುಂದೆಯೂ ಯಾವುದೇ  ಸರ್ಕಾರಿ ಪ್ರಶಸ್ತಿ, ಗೌರವ ಸ್ವೀಕರಿಸುವುದಿಲ್ಲ ಎಂದು ಘೋಷಿಸಿ ಕೊಂಡಿದ್ದಾರೆ. ೨೦೧೪ರಲ್ಲಿ ರಾಣಾಗೆ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಮತ್ತೊಂದೆಡೆ, ತೆಲುಗು ಲೇಖಕಿ  ಕಾತ್ಯಾಯಿನಿ ವಿದ್ಮಾಹೆ ಕೂಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಅವರು ಕಾಕತೀಯ ವಿವಿಯಲ್ಲಿ ತೆಲುಗು ಪ್ರೊಫೆಸರ್ ಆಗಿದ್ದಾರೆ. ಇದೇ ವೇಳೆ, ವಾರಾಣ ಸಿಯ ಹಿಂದಿ ಲೇಖಕ ಕಾಶಿನಾಥ್ ಸಿಂಗ್ ಅವರೂ ಪ್ರಶಸ್ತಿ ವಾಪಸ್ ನಿರ್ಧಾರ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com