ಜಮ್ಮು ಉದ್ವಿಗ್ನ (ಸಂಗ್ರಹ ಚಿತ್ರ)
ಜಮ್ಮು ಉದ್ವಿಗ್ನ (ಸಂಗ್ರಹ ಚಿತ್ರ)

ಖುರಾನ್ ಅಪವಿತ್ರ ಆರೋಪ: ಜಮ್ಮು ಉದ್ವಿಗ್ನ

ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಕೆಲ ಗುಂಪುಗಳು ಗಲಾಟೆ ಆರಂಭಿಸಿದ ಕಾರಣ ಜಮ್ಮು ನಗರ ಉದ್ವಿಗ್ನಗೊಂಡಿದ್ದು, ಶುಕ್ರವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ...

ಜಮ್ಮು: ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಕೆಲ ಗುಂಪುಗಳು ಗಲಾಟೆ ಆರಂಭಿಸಿದ ಕಾರಣ ಜಮ್ಮು ನಗರ ಉದ್ವಿಗ್ನಗೊಂಡಿದ್ದು, ಶುಕ್ರವಾರ  ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಜಮ್ಮುವಿನ ಹಿಲ್ಲಿ ಭದೇರ್ವ್ಹಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕಿಶ್ವಾರ್ ಪ್ರಾಂತ್ಯ ಬಹುತೇಕ ಸ್ಥಬ್ಧಗೊಂಡಿದೆ. ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳು, ಪ್ರಮುಖ ಮಾರಾಟ  ಪ್ರದೇಶಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಜಮ್ಮುವಿನಲ್ಲಿ ಗುರುವಾರ ನಡೆದ ದಸರಾ ಆಚರಣೆ ವೇಳೆ ಕೆಲ ದುಷ್ಕರ್ಮಿಗಳು ಪವಿತ್ರ ಖುರಾನ್ ಗ್ರಂಥವನ್ನು ಸುಟ್ಟುಹಾಕಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಜಮ್ಮುವಿನಲ್ಲಿ  ಇಂದು ಕೋಮುಗಲಭೆ ಉಂಟಾಗಿದ್ದು, ನಗರ ಉದ್ವಿಗ್ನಗೊಂಡಿದೆ. ಘಟನೆಯನ್ನು ಖಂಡಿಸಿ ಕೆಲ ಮುಸ್ಲಿಂ ಯುವಕರು ಜಮ್ಮು ನಗರದಹೀಗಾಗಿ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಹಿರಿಯ  ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com