ಮುಂಬೈ: ಪಾಕಿಸ್ತಾನ, ಗೋಮಾಂಸ ಹಾಗೂ ಅಯೋಧ್ಯೆ ವಿಷಯಗಳಲ್ಲಿ ಬಿಜೆಪಿ ನಿಲುವಿನ ಬಗ್ಗೆ ಶಿವಸೇನಾ ಅಧ್ಯಕ್ಷ ಉದ್ದವ್ ಠಾಕ್ರೆ ಟೀಕಾ ಪ್ರಹಾರ ಮಾಡಿದ್ದಾರೆ. ಬಿಜೆಪಿ ವಿರುದ್ಧ ಅಸಮಾಧಾನವಿದ್ದರೂ ಮಹಾರಾಷ್ಟ್ರ ಸರ್ಕಾರದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ದೇಶಕ್ಕೆ ದೇಶವೇ ತಲೆ ತಗ್ಗಿಸುವಂತೆ ಆಗಿದ್ದು ಪಾಕಿಸ್ತಾನದೊಂದಿಗೆ ನಂಟು ಬೇಡ ಎಂದು ಸೇನೆ ಪ್ರಚಾರ ಹಮ್ಮಿಕೊಂಡಿರುವುದರಿಂದ ಅಲ್ಲ, ದಾದ್ರಿ ಪ್ರಕರಣದಿಂದ ಎಂದು ಠಾಕ್ರೆ ಹೇಳಿದ್ದಾರೆ.
ನೀವು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಅವರ ಜತೆ ಮಾತಾಡಬಹುದಂತೆ ಆದರೆ ಶಿವಸೇನೆ ಜತೆ ಯಾಕಿಲ್ಲ ಎಂದು ಉದ್ಧವ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಅದೇ ವೇಳೆ ಬಿಜೆಪಿ ಜತೆಗಿನ ಮೈತ್ರಿಯಿಂದ ಶಿವಸೇನೆ ಹೊರಬರಲಿದೆ ಎಂದು ಸುದ್ದಿಯನ್ನು ಠಾಕ್ರೆ ತಳ್ಳಿ ಹಾಕಿದ್ದಾರೆ.