ಭಾರತದಿಂದ ಆಕ್ರಮಣಕಾರಿ ಮಿಲಿಟರಿ ನೀತಿ: ಷರೀಫ್

ಭಾರತವು ಪಾಕಿಸ್ತಾನಕ್ಕೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆಕ್ರಮಣಕಾರಿ ಮಿಲಿಟರಿ ನೀತಿ ಅನುಸರಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಪ್ರತಿತಂತ್ರ ಹಣಿಯುವುದು..
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಭಾರತವು ಪಾಕಿಸ್ತಾನಕ್ಕೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆಕ್ರಮಣಕಾರಿ ಮಿಲಿಟರಿ ನೀತಿ ಅನುಸರಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ  ಪ್ರತಿತಂತ್ರ ಹಣಿಯುವುದು ಅನಿವಾರ್ಯವಾಗಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಮಾತುಕತೆಗೆ ಹಿಂದೇಟು ಹಾಕುತ್ತಿರುವ ಭಾರತ ಭಾರಿ ಶಸ್ತ್ರಾಸ್ತ್ರ ಸಂಗ್ರಹ ಕಾರ್ಯದಲ್ಲಿ ತೊಡಗಿದೆ. ಭಾರತದ ಈ ಕಾರ್ಯಕ್ಕೆ ಅನೇಕ ರಾಷ್ಟ್ರಗಳ ಬೆಂಬಲವೂ ಸಿಗುತ್ತಿದೆ. ಒಟ್ಟಾರೆ ನೆರೆಯ  ದೇಶವು ಅಪಾಯಕಾರಿ ಮಿಲಿಟಿರಿ ಸಿದ್ಧಾಂತವನ್ನು ಅನುಸರಿಸುತ್ತಿದೆ ಎಂದು ಷರೀಫ್ ಅವರು ಯುಎಸ್ ಇನ್ಸ್ ಟಿಟ್ಯೂಟ್ ಆಫ್ ಪೀಸ್(ಯುಎಸ್‍ಐಪಿ)ನಲ್ಲಿ ಹೇಳಿದ್ದಾರೆ. ಎನ್‍ಎಸ್‍ಎ ಹಂತದ  ಮಾತುಕತೆ ಬೆನ್ನಲ್ಲೇ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘನೆ ನಡೆಸಲಾಗಿದೆ.

ಇದರ ಜತೆಗೆ ಭಾರತೀಯ ರಾಜಕಾರಣಿಗಳು ಹಾಗೂ ಮಿಲಿಟರಿ ನಾಯಕತ್ವವು ಆಕ್ರಮಣಕಾರಿ ಹೇಳಿಕೆಗಳನ್ನೂ ನೀಡಿದೆ ಎಂದು ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು  ಭಾರತದ ಜತೆಗಿನ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪಾಕ್ ನೀಡಿದ ಆಹ್ವಾನವನ್ನು ಅಮೆರಿಕ ಮತ್ತೊಮ್ಮೆ ತಳ್ಳಿಹಾಕಿದೆ. ಭಾರತ ಮತ್ತು ಪಾಕ್ ವಿವಾದದ ನಡುವೆ ಮೂರನೇ ವ್ಯಕ್ತಿಯಾಗಿ ತಾನು ಮಧ್ಯಪ್ರವೇಶಿಸಲ್ಲ ಎಂದು ಷರೀಫ್ರಿಗೆ ಅಮೆರಿಕ ಸೂಚ್ಯವಾಗಿ ತಿಳಿಸಿದೆ.

ಷರೀಫ್ಗೆ ವಿರೋಧ: ಬಲೂಚಿಸ್ತಾನವನ್ನು ಪಾಕ್ ಹಿಡಿತದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ನವಾಜ್ ಷರೀಫ್ರನ್ನು ಎಳೆದಾಡಿದ ಘಟನೆ ನಡೆದಿದೆ. ಯು.ಎಸ್.ಇನ್ಸ್ಟಿಟ್ಯೂಟ್ ಆಫ್ ಪೀಸ್‍ನಲ್ಲಿ  ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಗುಂಪೊಂರಲ್ಲಿದ್ದ ``ಒಸಾಮಾ ಬಿನ್ ಲಾಡೆನ್‍ನ ಸ್ನೇಹಿತ'', ``ಬಲೂಚಿಸ್ತಾನವನ್ನು ಮುಕ್ತಿಗೊಳಿಸಿ'' ಎಂದು ವ್ಯಕ್ತಿ ಸ್ಟೇಜ್‍ಗೆ ಬಂದು ಎಳೆದಾಡಿದ್ದಾನೆ.

ಲಷ್ಕರೆ ತಯ್ಬಾದ ವಿರುದ್ಧ
ಕ್ರಮ ಕೈಗೊಳ್ಳುವೆ ಎಂಬ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ಭಾರತವನ್ನು ಸಂಪ್ರೀತಗೊಳಿಸಲು ನೀಡಿದಂಥದ್ದು. ಇದು ಕಾಶ್ಮೀರದ ಮುಸ್ಲಿಮರ ಭಾವನೆಯನ್ನು ನೋಯಿಸಲಿದೆ. ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಈ ಹೇಳಿಕೆ ಸರಿಯಲ್ಲ.
-ಅಬ್ದುಲ್ಲಾ ಗಝ್ನವಿ, ಲಷ್ಕರೆ ತಯ್ಬಾ ವಕ್ತಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com