ಭಾರತೀಯ ಮೂಲದ ಅಮೇರಿಕ ವೈದ್ಯರಿಂದ ಗ್ಲೋಬಲ್ ಹೆಲ್ತ್ ಶೃಂಗಸಭೆ

ಭಾತೀಯ ಮೂಲದ ಅಮೇರಿಕಾ ವೈದ್ಯರು(ಎಎಪಿಐ) ನವದೆಹಲಿಯಲ್ಲಿ 2016 ರ ಜ.1 ರಿಂದ 3 ವರೆಗೆ ಗ್ಲೋಬಲ್ ಹೆಲ್ತ್ 10 ನೇ ಜಾಗತಿಕ ಶೃಂಗಸಭೆ ಹಮ್ಮಿಕೊಂಡಿದ್ದಾರೆ.
ಭಾರತೀಯ ಮೂಲದ ಅಮೇರಿಕ ವೈದ್ಯರಿಂದ  ಗ್ಲೋಬಲ್ ಹೆಲ್ತ್ ಶೃಂಗಸಭೆ
ಭಾರತೀಯ ಮೂಲದ ಅಮೇರಿಕ ವೈದ್ಯರಿಂದ ಗ್ಲೋಬಲ್ ಹೆಲ್ತ್ ಶೃಂಗಸಭೆ

ನವದೆಹಲಿ: ಭಾತೀಯ ಮೂಲದ ಅಮೇರಿಕಾ ವೈದ್ಯರು(ಎಎಪಿಐ) ನವದೆಹಲಿಯಲ್ಲಿ  2016 ರ ಜ.1 ರಿಂದ 3 ವರೆಗೆ ಗ್ಲೋಬಲ್ ಹೆಲ್ತ್  10 ನೇ ಜಾಗತಿಕ ಶೃಂಗಸಭೆ ಹಮ್ಮಿಕೊಂಡಿದ್ದಾರೆ.
ಸಾಂಕ್ರಾಮಿಕವಲ್ಲದ ರೋಗಗಳು ಹಾಗೂ ಮಹಿಳೆಯರ ಆರೋಗ್ಯ ಶೃಂಗಸಭೆಯ ಪ್ರಮುಖ ವಿಷಯವಾಗಿರಲಿದೆ. ಇದೇ ಮೊದಲ ಬಾರಿಗೆ ಜ.2 ರಂದು ಟ್ರಾಮಾಟಿಕ್ ಮೆದುಳಿನ ಗಾಯದ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತಕ್ಕೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಆಹ್ವಾನಿಸಲಾಗುವುದು ಎಂದು ಎಎಪಿಐ ಅಧ್ಯಕ್ಷೆ ಡಾ. ಸೀಮಾ ಜೈನ್ ಹೇಳಿದ್ದಾರೆ.
ದಕ್ಷ, ಕಡಿಮೆ ವೆಚ್ಚದ ಪರಿಣಾಮಕಾರಿ ಆರೋಗ್ಯ ಪರಿಹಾರಗಳನ್ನು ಭಾರತಕ್ಕೆ ಪರಿಚಯಿಸುವುದಕ್ಕೆ ಭಾರತೀಯ ಮೂಲದ ಅಮೇರಿಕ ವೈದ್ಯರು ಹಮ್ಮಿಕೊಂಡಿರುವ ಶೃಂಗಸಭೆ ಸಹಕಾರಿಯಾಗಲಿದೆ. ಎಎಪಿಐ ಭಾರತದಲ್ಲಿರುವ ಸ್ಥಳೀಯ ಪಾಲುದಾರರೊಂದಿಗೆ ಒಗ್ಗೂಡಿ ಪರಿಣಾಮಕಾರಿ ಆರೋಗ್ಯ ಪರಿಹಾರಗಳನ್ನು ನೀಡುತ್ತೇವೆ ಎಂದು ಡಾ.ಸೀಮಾ ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com