
ನವದೆಹಲಿ: `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಖ್ಯಾತಿಯ ಅಂತಾರಾಷ್ಟ್ರೀಯ ಚಿತ್ರ ನಿರ್ದೇಶಕಿ ಲೆಸ್ಲೀ ಉಡ್ವಿನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಭಾರತೀಯಫಾಸ್ಟ್ ರ್ಟ್ಯಾಕ್ ಕೋರ್ಟ್‍ಗಳ ಬಗ್ಗೆ ಮಾತನಾಡಿದ್ದಾರೆ.
`ಭಾರತದಫಾಸ್ಟ್ ರ್ಟ್ಯಾಕ್ ಕೋರ್ಟ್‍ಗಳು ಬರೀ ಜೋಕ್ ಆಗಿವೆ. ದೇಶವನ್ನೇ ಆಘಾತಕ್ಕೆ ಈಡುಮಾಡಿದ ದೆಹಲಿಯ ಜ್ಯೋತಿ ಸಿಂಗ್‍ಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಕೃತ್ಯದ ವಿಚಾರಣೆ ಮುಂದಿನ ಎರಡು ವರ್ಷಕ್ಕೆ ಸುಪ್ರೀಂ ಕೋರ್ಟ್ ನ ಮುಂದೆ ಬರುವಂತಿಲ್ಲ. ಅಲ್ಲಿಯವರೆಗೆ ಆಕೆಯ ತಂದೆತಾಯಿಗಳ ಶೋಕಕ್ಕೆ ಯಾವುದೇ ತಾರ್ಕಿಕ ಅಂತ್ಯ, ಮುಕ್ತಾಯವಿಲ್ಲ' ಎಂದು ಲೆಸ್ಲೀ ತಮ್ಮ ಫೇಸ್‍ಬುಕ್ ಖಾತೆಯ ಒಂದು ಸ್ಟೇಟಸ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
Advertisement