ಪುಣೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಓವೈಸಿಗೆ ಅನುಮತಿ ನಿರಾಕರಣೆ

ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿಗೆ ಪುಣೆಯ ಕೊಂಡ್ವಾದಲ್ಲಿ ಸಮಾವೇಶ ನಡೆಸಲು ಪೊಲೀಸರು ಅನುಮತಿ...
ಅಕ್ಬುರುದ್ದೀನ್ ಓವೈಸಿ
ಅಕ್ಬುರುದ್ದೀನ್ ಓವೈಸಿ
ಪುಣೆ: ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿಗೆ ಪುಣೆಯ ಕೊಂಡ್ವಾದಲ್ಲಿ ಸಮಾವೇಶ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಪುಣೆ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕೊಂಡ್ವಾದಲ್ಲಿ ಸಮಾವೇಶ ನಡೆಸಲು ಪಕ್ಷವು ನಿರ್ಧರಿಸಿತ್ತು. ಮುನ್ನೇಚ್ಚರಿಕೆ ಕ್ರಮವಾಗಿ ವಿವಾದಿತ ಹೇಳಿಕೆಗಳಿಗೆ ಸುದ್ದಿಯಾಗುತ್ತಿರುವ ಅಕ್ಬರುದ್ದೀನ್ ಗೆ ಸಮಾವೇಶದಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಲಾಗಿದೆ.
ನವೆಂಬರ್ ನಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 26ರಂದು ಸಮಾವೇಶ ನಡೆಸಲು ಪಕ್ಷ ನಿರ್ಧರಿಸಿತ್ತು. ಚುನಾವಣೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಬರುದ್ದೀನ್ ಓವೇಸಿಗೆ ನಿಷೇಧ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಇತ್ತೀಚೆಗಷ್ಟೇ ನಡೆದ ಬಿಹಾರ ಚುನಾವಣಾ ಸಭೆಗಳಲ್ಲಿ ಅಕ್ಬರುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಅವರು ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೈದ್ರಾಬಾದ್ ಮೂಲತ ಎಐಎಂಐಎಂ ಪಕ್ಷ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಕ್ಬರುದ್ದೀನ್ ರ ಸಹೋದರ ಅಸಾದುದ್ದೀನ್ ಓವೈಸಿ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಅಕ್ಬರುದ್ದೀನ್ ತೆಲಂಗಾಣ ವಿಧಾನಸಭೆಯ ಶಾಸಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com