ದೆಹಲಿಯಲ್ಲಿ ಈ ವರ್ಷ 1000 ಕ್ಕೂ ಹೆಚ್ಚು ಬಾಲಾಪರಾಧಿಗಳ ಬಂಧನ

ದೆಹಲಿಯಲ್ಲಿ ಅತ್ಯಾಚಾರದಂತಹ ಘೋರ ಅಪರಾಧಗಳು ಹೆಚ್ಚುತ್ತಿದ್ದು, ಅಪರಾಧಗಳನ್ನು ಎಸಗುತ್ತಿರುವ ಬಾಲಾಪರಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಬಾಲಾಪರಾಧಿಗಳ ಬಂಧನ(ಸಾಂದರ್ಭಿಕ ಚಿತ್ರ)
ಬಾಲಾಪರಾಧಿಗಳ ಬಂಧನ(ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರದಂತಹ ಘೋರ ಅಪರಾಧಗಳು ಹೆಚ್ಚುತ್ತಿದ್ದು, ಅಪರಾಧಗಳನ್ನು ಎಸಗುತ್ತಿರುವ ಬಾಲಾಪರಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. 
2014 ಕ್ಕಿಂತ 2015 ರಲ್ಲಿ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಾಗಿದ್ದು ಘೋರ ಅಪರಾಧಗಳೆಸಗಿರುವ 100 ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ. 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರು ಕೆಲ ದಿನಗಳ ಹಿಂದೆ ಎರಡು ವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದರು. ಡಿಸೆಂಬರ್ 16  2012 ರಂದು ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಗೆ ಕಠಿಣ ಶಿಕ್ಷೆ ವಿಧಿಸದೇ ಇರುವುದು ಕಾನೂನಿನ ವ್ಯಂಗ್ಯವೆಂದೇ ಅಸಮಾಧಾನ ವ್ಯಕ್ತವಾಗಿದ್ದು ಬಾಲಾಪರಾಧ ಹೆಚ್ಚುತ್ತಲೇ ಇದೆ.    
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿರುವ  ವರದಿ ಪ್ರಕಾರ 2007 ರಲ್ಲಿ 14 ವರ್ಷದವನಾಗಿದ್ದ ಆಕಾಶ್ ಎಂಬ ಅಪ್ರಾಪ್ತ ಸಹಪಾಠಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆಕಾಶ್ ಎಂಬಾತ ಎಂಟು ವರ್ಷಗಳ ಬಳಿಕ ಮತ್ತೆ ಇಂಥದ್ದೇ ಹೀನಕೃತ್ಯ ನಡೆಸಿದ್ದು ತನ್ನ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿ 15 ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದಾನೆ.
ದೆಹಲಿಯಲ್ಲಿ ಬಾಲಾಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಲಾಪರಾಧಿಗಳ ವಯಸ್ಸನ್ನು 18 ರಿಂದ 16 ಕ್ಕೆ ಇಳಿಸಬೇಕು ಎಂದು ದೆಹಲಿಯ ಶಾಸಕರು ಹಾಗೂ ಕಾನೂನು ಜಾರಿ ಸಂಸ್ಥೆಗಳು ಒತ್ತಾಯಿಸುತ್ತಿವೆ. ಆದರೆ ಇದಕ್ಕೆ ಮಕ್ಕಳ ಹಕ್ಕುಗಳ ಚಳವಳಿಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com