ನವದೆಹಲಿ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಪಿರೋಜಬಾದ್ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಭುವನೇಶ್ವರಿ ದೇವಿ ಅವರ ಮೇಲೆ ಗುಂಪೊಂದು ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರೊಬ್ಬರು ಆಗ್ರಾದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರನ್ನು ನೋಡಲು ಬಂದಿದ್ದ ಭುವನೇಶ್ವರಿ ದೇವಿ ಅವರು ಆಸ್ಪತ್ರೆ ಬಳಿ ಇದ್ದ ಅಂಗಡಿ ಎದುರು ಕಾರು ಪಾರ್ಕ್ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಂಗಡಿಯವನು ಮತ್ತು ಆತನ ಸಂಬಂಧಿಕರು ಗುಂಪು ಕಟ್ಟಿಕೊಂಡು ಮಹಿಳಾ ಇನ್ಸ್ ಪೆಕ್ಟರ್ ರೊಂದಿಗೆ ಮಾತಿನ ಚಕಮಕಿ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹಲ್ಲೆ ಮಾಡಿದವರು ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲದೇ, ಬಂಧನಕ್ಕೊಳಗಾದ ಆರೋಪಿಗಳು ಪೊಲೀಸ್ ಠಾಣೆಯಲ್ಲೂ ಮಹಿಳಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಗ್ರಾ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.