ಹರಿಯಾಣದಲ್ಲಿ ದಲಿತ ಮಕ್ಕಳ ಹತ್ಯೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಕೆ.ಸಿಂಗ್, ಎಲ್ಲೋ ನಾಯಿಗೆ ಕಲ್ಲು ಹೊಡೆದರೆ ಕೇಂದ್ರವನ್ನು ದೂಷಿಸುವುದು ಸರಿಯಲ್ಲ. ಇಂತಹ ವಿಚಾರಗಳು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿಕೆ ನೀಡಿದ್ದರು. ಸಿಂಗ್ ಅವರ ಹೇಳಿಕೆ ರಾಷ್ಟ್ರಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಅಚಾತುರ್ಯ ಅರಿತ ವಿಕೆ ಸಿಂಗ್ ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.