
ಮುಂಬೈ: ಐಪಿಎಲ್'ನ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರು ಷೇರು ವರ್ಗಾವಣೆ ಮಾಡುವಲ್ಲಿ ಅವ್ಯವಹಾರ ಮಾಡಿದ್ದಾರೆಂಬ ಆರೋಪದ ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಯಲಯವು ಮಂಗಳವಾರ ಸಮನ್ಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.
ಕೆಕೆಆರ್ ತಂಡದ ಸಹಪಾಲುದಾರರರಾಗಿರುವ ನಟಿ ಜೂಹಿ ಚಾವ್ಲಾ ಮತ್ತು ಅವರ ಪತಿ ಜಯ್ ಮೆಹ್ತಾ ಅವರ ಸೀ ಐಲೆಂಡ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ ಕಂಪನಿಗೆ ನಟ ಶಾರುಖ್ ಅವರು ಕೆಕೆಆರ್ ತಂಡದ ಷೇರುಗಳನ್ನು ವರ್ಗಾವಣೆ ಮಾಡಿದ್ದರು. ಷೇರು ವರ್ಗಾವಣೆ ಪ್ರಕ್ರಿಯೆಯಲ್ಲಿ ಶಾರುಖ್ ಅವರು ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿರುವುದಾಗಿ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಈ ಹಿಂದೆ ಜಾರಿ ನಿರ್ದೇಶನಾಲಯವು ನಟಿ ಜೂಹಿ ಜಾವ್ಹಾ, ಪತಿ ಜಯ್ ಮೆಹ್ತಾ ಹಾಗೂ ಶಾರುಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಜಾರಿ ನಿರ್ದೇಶನಾಲಯದ ನಿರ್ದೇಶನದಂತೆ ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದರು. ಆದರೆ, ನಟ ಶಾರುಖ್ ಖಾನ್ ಮಾತ್ರಿ ಚಿತ್ರೀಕರಣದಲ್ಲಿ ಮಗ್ನರಾಗಿರುವುದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇದೀಗ ಜಾರಿ ನಿರ್ದೇಶನಾಲಯವು ಮತ್ತೆ ಶಾರುಖ್ ಖಾನ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
Advertisement