ದೆಹಲಿಗೆ ಬರಲಿದ್ದಾರೆ ತಿರುಪತಿ ಬಾಲಾಜಿ!

ದೇಶದ ರಾಜಧಾನಿಯಲ್ಲಿ ನೆಲೆಸಿರುವ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಆಂಧ್ರಪ್ರದೇಶಕ್ಕೆ ಹೋಗಬೇಕೆಂದಿಲ್ಲ. ಯಾಕೆಂದರೆ ಅಕ್ಟೋಬರ್ 31 ರಿಂದ ನವೆಂಬರ್ 8ರ...
ತಿರುಪತಿ ದೇವಾಲಯ (ಕೃಪೆ: ಪಿಟಿಐ)
ತಿರುಪತಿ ದೇವಾಲಯ (ಕೃಪೆ: ಪಿಟಿಐ)
ನವದೆಹಲಿ: ದೇಶದ ರಾಜಧಾನಿಯಲ್ಲಿ ನೆಲೆಸಿರುವ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಆಂಧ್ರಪ್ರದೇಶಕ್ಕೆ ಹೋಗಬೇಕೆಂದಿಲ್ಲ. ಯಾಕೆಂದರೆ ಅಕ್ಟೋಬರ್ 31 ರಿಂದ ನವೆಂಬರ್ 8ರ ವರೆಗೆ ತಿರುಮಲದಲ್ಲಿ ನಡೆಯುವ ಉತ್ಸವವನ್ನು ದೆಹಲಿಯ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಹೊರಗೆ ತಿರುಪತಿ ಉತ್ಸವವನ್ನು ಏರ್ಪಡಿಸಲಾಗಿದೆ. ತಿರುಪತಿಯಲ್ಲಿ ನಡೆಯುವ ಜಾತ್ರೆಯಂತೆಯೇ ಇಲ್ಲಿ ಎಲ್ಲಾ ರೀತಿಯ ಶೃಂಗಾರಗಳನ್ನು ಮಾಡಲಾಗುವುದು. ತಿರುಮಲದಲ್ಲಿವ ಜನರೇ ಇಲ್ಲಿ ಜಾತ್ರೆಯ ತಯಾರಿಗಳನ್ನು ಮಾಡುತ್ತಾರೆ.
ಶ್ರೀ ವೆಂಕಟೇಶ್ವರ ವೈಭವೋತ್ಸವಂ ದೆಹಲಿಯಲ್ಲಿ ನಡೆಯಲಿದ್ದು, ಅದನ್ನು ನಡೆಸಲು ಸುಮಾರು 160ಕ್ಕಿಂತಲೂ ಹೆಚ್ಚು ಪೂಜಾರಿಗಳು ದೆಹಲಿಗೆ ಆಗಮಿಸಿದ್ದಾರೆ. ಬಲ್ಲಮೂಲಗಳಲ ಪ್ರಕಾರ ಪ್ರಾಣಪ್ರತಿಷ್ಠೆ ಅಕ್ಟೋಬರ್ 3ರಂದು ನಡೆಯಲಿದೆ. 
ಸೇವೆಗಳ ನಂತರ ಲಡ್ಡೂ ಪ್ರಸಾದ ವಿತರಣೆ ಮಾಡಲಾಗುವುದು. ಪ್ರಸಾದ ತಯಾರಿಸಲು ತಿರುಮಲದಿಂದಲೇ ವಸ್ತುಗಳನ್ನು ತರಲಾಗುವುದು ಹಾಗೂ ತಯಾರಕರೂ ತಿರುಮಲದವರೇ ಆಗಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com