26ಕ್ಕೂ ಕಂಪನಕ್ಕೂ ಇದೆಯೇ ನಂಟು?

ಇದು ಕಾಕತಾಳೀಯವೋ ಅಥವಾ ನಿಜಕ್ಕೂ ಹಾಗೇನಾದರೂ ಸಂಬಂಧವಿದೆಯೋ ಗೊತ್ತಿಲ್ಲ. ಭೂಕಂಪಕ್ಕೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಇದು ಕಾಕತಾಳೀಯವೋ ಅಥವಾ ನಿಜಕ್ಕೂ ಹಾಗೇನಾದರೂ ಸಂಬಂಧವಿದೆಯೋ ಗೊತ್ತಿಲ್ಲ. ಭೂಕಂಪಕ್ಕೂ ದಿನಾಂಕ 26ಕ್ಕೂ ಹಲವು ದಶಕಗಳ ನಂಟಿದೆ.
ಭೂಕಂಪ ಮಾತ್ರವಲ್ಲ, ಹಲವು ನೈಸರ್ಗಿಕ ವಿಕೋಪಗಳು 26ನೇ ತಾರೀಕಿನಂದೇ ಸಂಭವಿಸಿವೆ. 13 ಅಪಶಕುನದ ಸಂಖ್ಯೆ ಅಂತಾರೆ. ಇದು ಹದಿಮೂರರ ಡಬಲ್. ಅಂದ್ರೆ ದುಪ್ಪಟ್ಟು ಅಪಶಕುನ ಅಂತಿರಬಹುದಾ? ಇರಲಿ ಈ ಪಟ್ಟಿಯನ್ನೊಮ್ಮೆ ಗಮನಿಸಿ. 
ಇದೆಲ್ಲದರ ಜೊತೆ ಮುಂಬೈಯನ್ನು ನಡುಗಿಸಿದ ಉಗ್ರದಾಳಿಯೂ 2008ರ ನ.26ರಂದೇ ನಡೆದಿದೆ. ಕ್ರಕಟವ್‍ನಲ್ಲಿ ಜ್ವಾಲಾಮುಖಿ ಸ್ಫೋಟ ನಡೆದದ್ದು ಆ.26ರಂದು. ಮೆರಾಪಿ ಜ್ವಾಲಾಮುಖಿ ಸ್ಫೋಟಿಸಿದ್ದು ಅ.26ರಂದು. ಮೆಂಟಾವಾಯ್ ಸುನಾಮಿ ಅ.26ರಂದೇ ಅಪ್ಪಳಿಸಿತ್ತು. 
ಮುಂಬೈ ಪ್ರವಾಹ ಸಂಭವಿಸಿದ್ದೂ ಜು.26ರಂದೇ! ಸಾವಿರ ಸಾವುಗಳಿಗೆ ಕಾರಣವಾದ ಸಬಾ ಟೈಡಲ್ ವೇವ್ಸ್ 1996ರ ಡಿ.26ರಂದೇ ಸಂಭವಿಸಿತ್ತು. ಇದೀಗ ಮತ್ತೊಂದು 26, ಅಂದರೆ ಅಕ್ಟೋಬರ್ 26 ಮತ್ತೊಂದು ಭೂಕಂಪಕ್ಕೆ ಸಂಭವಿಸಿದೆ.
ಎಲ್ಲಿ ದಿನಾಂಕ
ಚೀನಾ ಭೂಕಂಪ 26-7-1976
ಗುಜರಾತ್ ಭೂಕಂಪ 26-1-2001
ಹಿಂದೂಮಹಾಸಾಗರ ಸುನಾಮಿ 26-12-2004
ತೈವಾನ್ ಭೂಕಂಪ 26-7-2010
ಜಪಾನ್ ಭೂಕಂಪ 26-2-2010
ಚೀನಾ ಭೂಕಂಪ 26-4-2015
ರೋಡ್ಸ್ ಭೂಕಂಪ 26-6-1926
ಯುಗೋಸ್ಲಾವಿಯಾ 26-7-1963
ಇರಾನ್ ಭೂಕಂಪ 26-12-2003
ಉತ್ತರ ಅಮೆರಿಕ 26-1-1700
ಟರ್ಕಿ ಭೂಕಂಪ 26-12-1939
ಪೋರ್ಚುಗಲ್ 26-1-1951
ತಾಸಿಕ್ 26-6-2010
ಚೀನಾದ ಕಾನ್ಸೂ 26-12-1932

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com