
ನವದೆಹಲಿ: ಮೂರು ಪಕ್ಷಗಳ ಮಹಾಮೈತ್ರಿ ಕೂಟ ರಚನೆಗೆ ಪ್ರಮುಖ ಕಾರಣವೇ ಹತಾಶೆ ಭಾವನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ಜನತೆಗೆ ಇದೀಗ ಅರಿವಾಗಿದ್ದು, ಕೇಂದ್ರ ರಾಜ್ಯವನ್ನು ಅಭಿವೃದ್ಧಿ ಮಾಡುವ ಬಗ್ಗೆ ಜನತೆಗೆ ನಂಬಿಕೆ ಬಂದಿದೆ. ಇದೀಗ ಬಿಹಾರದಲ್ಲಿರುವ ನಕಾರಾತ್ಮಕ ಬೆಳವಣಿಗೆಯನ್ನು ತೊಡೆದು ಹಾಕಲು ಜನತೆ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಹಾರದಲ್ಲಿ ಬಿಜೆಪಿ ಪಕ್ಷ ಗೆಲವು ಸಾಧಿಸಿದ್ದೇ ಆದರೆ ಅದಕ್ಕೆ ಪ್ರಮುಖ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಪ್ರಿಯತೆ ಎಂದು ಹೇಳಿದ್ದಾರೆ.
ಈ ಹಿಂದೆ ಜಾತಿ ಮತ್ತು ಸಮಾಜಕ್ಕಾಗಿ ಮತ ಹಾಕುತ್ತಿದ್ದ ಜನತೆಗೆ ಇದೀಗ ಅರಿವಾಗಿದ್ದು, ಇಲ್ಲಿನ ಯುವ ಜನರು ಇದೀಗ ರಾಜ್ಯದ ಅಭಿವೃದ್ಧಿಗಾಗಿ ಎನ್ ಡಿಎ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿತ್ತಿದ್ದಾರೆ. ಮಹಾಮೈತ್ರಿ ಕೂಡದಲ್ಲಿ ಕಾಂಗ್ರೆಸ್ ಪಕ್ಷವೊಂದೇ ರಾಷ್ಟ್ರೀಯ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಇದೀಗ ಅಳಿವಿನಂಚಿನಲ್ಲಿದೆ. ಇದೀಗ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಹಾರ ಚುನಾವಣೆ ಮಾಡು ಇಲ್ಲವೇ ಮಡಿ ಎಂಬ ಯುದ್ಧವಾಗಿದೆ. ಜೆಡಿಯು ಪಕ್ಷಕ್ಕೆ ರಾಜಕೀಯ ಆಟವಾಡಲು ಇದೊಂದು ಸದಾವಕಾಶವಾಗಿದೆ. ಮಹಾಮೈತ್ರಿ ಕೂಟವೊಂದು ಹತಾಶೆಯಿಂದಾಗಿ ರಚನೆಯಾಗಿದೆ ಎಂದು ಹೇಳಿದ್ದಾರೆ.
Advertisement