ಟೆಕ್ಕಿ ಏಸ್ತರ್ ಅನೂಹ್ಯ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ ಗಲ್ಲು ಶಿಕ್ಷೆ

ಸಾಫ್ಟ್ ವೇರ್ ಇಂಜಿನಿಯರ್ ಅನೂಹ್ಯ ಅತ್ಯಾಚಾರ, ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಅಪರಾಧಿ ಚಂದ್ರಭಾನ್ ಸನಾಪ್ ಗೆ ಮುಂಬೈ ಕೋರ್ಟ್ ಗಲ್ಲು ಶಿಕ್ಷಿ ವಿಧಿಸಿದೆ.
ಅನೂಹ್ಯ
ಅನೂಹ್ಯ

ಮುಂಬೈ: ಸಾಫ್ಟ್ ವೇರ್ ಇಂಜಿನಿಯರ್ ಅನೂಹ್ಯ ಅತ್ಯಾಚಾರ, ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಅಪರಾಧಿ ಚಂದ್ರಭಾನ್ ಸನಾಪ್ ಗೆ ಮುಂಬೈನ ಮಹಿಳಾ ವಿಶೇಷ ನ್ಯಾಯಾಲಯ ಕೋರ್ಟ್ ಗಲ್ಲು ಶಿಕ್ಷಿ ವಿಧಿಸಿದೆ.
ಕಳೆದ ಜನವರಿಯಲ್ಲಿ ಟಿಸಿಎಸ್ ಉದ್ಯೋಗಿ ಏಸ್ತರ್ ಅನೂಹ್ಯ ಮೇಲೆ ಅತ್ಯಾಚಾರ ನಡೆಸಿದ್ದ ಚಾಲಕ ಚಂದ್ರಭಾನ್ ಸನಾಪ್, ಕಾಡಿನಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ಘಟನೆ ನಡೆದ ಬೆನ್ನಲ್ಲೇ, ಮಾಡಿದ್ದ ಅಪರಾಧಿ ಚಂದ್ರಭಾನ್, ತಾನು ನಡೆಸಿದ್ದ ಅಪರಾಧ ಕೃತ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಜ್ಯೋತಿಷಿ ಮೊರೆ ಹೋಗಿದ್ದ. ಅಪರಾಧಿಗೆ ತನ್ನ ತಪ್ಪಿನ ಅರಿವಾಗಿರುವುದರಿಂದ ಗಲ್ಲು ಶಿಕ್ಷೆ ವಿಧಿಸದೇ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆತನ ಪರ ವಕೀಲ ಪ್ರಕಾಶ್ ಸಲ್ಸಿಂಗೇಕರ್ ವಾದ ಮಂಡಿಸಿದ್ದರು.
ಪ್ರತಿವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಾ ಠಾಕ್ರೆ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹತ್ಯೆಗೀಡಾದ ಅನೂಹ್ಯ ಹೈದರಾಬಾದ್ ಮೂಲದ ಮಹಿಳೆಯಾಗಿದ್ದು, ಮುಂಬೈ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜನವರಿ 4 ರಂದು ಹೈದರಾಬಾದ್ ನಿಂದ ಹೊರಟಿದ್ದ ಅನುಹ್ಯ ಜ 5 ರಂದು ಮುಂಬೈ ಗೆ ಆಗಮಿಸಬೇಕಿತ್ತು. ಅನುಹ್ಯ ತಂದೆ ಬೆಳಿಗ್ಗೆ ಆಕೆಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಜನವರಿ 16 ರಂದು ಅನೂಹ್ಯ ಮೃತದೇಹ  ಪತ್ತೆಯಾಗಿತ್ತು.  ಚಂದ್ರಭಾನ್ ಸನಾಪ್ ಎಂಬ ವ್ಯಕ್ತಿ ಅನೂಹ್ಯಾಳನ್ನು ಕರೆದೊಯ್ದಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಡ್ರಾಪ್ ನೀಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದು ತನಿಖೆ ವೇಳೆ ಬಹಿರಂಗವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com