
ಮುಂಬೈ: ಬಿಜೆಪಿ ಮೈತ್ರಿ ಪಕ್ಷವಾಗಿರುವ ಶಿವಸೇನೆಯೊಂದು ನಾಟಕದ ಕಂಪನಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ವವೀಸ್ ಅವರು ಶುಕ್ರವಾರ ಹೇಳಿದ್ದಾರೆ.
ಮಹರಾಷ್ಟ್ರದ ಪಿಡಬ್ಲ್ಯೂಡಿ ಸಚಿವ ಏಕನಾಥ್ ಶಿಂಧೆ ಸಲ್ಲಿಸಿದ್ದ ರಾಜಿನಾಮೆ ಪತ್ರವನ್ನು ಸ್ವೀಕರಿಸಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರಾಕರಿಸಿರುವುದರ ಕುರಿತಂತೆ ರ್ಯಾಲಿಯೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶಿವಸೇನೆಯೊಂದು ನಾಟಕದ ಕಂಪನಿಯಿದ್ದಂತೆ. ಕಲ್ಯಾಣ್-ಡೋಂಬಿವಲಿಯಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಎಲ್ಲಿ ಸೋಲನ್ನು ಅನುಭವಿಸುತ್ತೇವೆಯೇ ಎಂಬ ನಿರಾಶೆಯಲ್ಲಿ ಬಿಜೆಪಿ ಹಾಗೂ ಶಿವಸೇನೆಯಿದೆ ಎಂದು ಹೇಳಿದ್ದಾರೆ.
ಹುಲಿ ಹೆಜ್ಜೆ ಬಗ್ಗೆ ನಮಗೆ ಹೇಳಬೇಡಿ. ನಾವು ಹುಲಿ ಬಾಯಿಯೊಳಗೆ ಕೈ ಹಾಕಿ ಅದರ ಹಲ್ಲಿನ ಸಂಖ್ಯೆ ಎಣಿಸುವವರು ನಾವು. ಶಿಂಧೆ ರಾಜಿನಾಮೆಯೊಂದು ನಾಟಕೀಯ ಬೆಳವಣಿಗೆಯಾಗಿದ್ದು, ಇದರಿಂದ ಯಾರೂ ಭಯ ಪಡಬೇಕಿಲ್ಲ. ಎಂದು ತಮ್ಮ ಬೆಂಬಲಿಕರಿಗೆ ಹೇಳಿದ್ದಾರೆ.
ಮಹಾರಾಷ್ಟ್ರದ ಸರ್ಕಾರ ನನ್ನ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದ ಮಹಾರಾಷ್ಟ್ರದ ಪಿಡಬ್ಸ್ಯೂಡಿ ಸಚಿವ ಏಕನಾಥ್ ಶಿಂಧೆ ಅವರು ಇಂದು ಸಾರ್ವಜನಿಕ ರ್ಯಾಲಿ ನಡೆಸಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರಿಗೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಶಿಂಧೆಯವರ ರಾಜೀನಾಮೆಯನ್ನು ಉದ್ಧವ್ ಠಾಕ್ರೆಯವರು ಸ್ವೀಕರಿಸಲು ನಿರಾಕರಿಸಿದ್ದರು.
Advertisement