ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದೆ: ಶಿವಸೇನೆ

ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದ್ದು, ಮಹಾರಾಷ್ಟ್ರದೊಂದಿಗಿನ ತನ್ನ ಬೆಂಬಲವನ್ನು ಹಿಂಪಡೆಯುವಂತೆ ಬಿಜೆಪಿಗೆ ಶಿವಸೇನೆ ಶುಕ್ರವಾರ ಆಗ್ರಹಿಸಿದೆ...
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದ್ದು, ಮಹಾರಾಷ್ಟ್ರದೊಂದಿಗಿನ ತನ್ನ ಬೆಂಬಲವನ್ನು ಹಿಂಪಡೆಯುವಂತೆ ಬಿಜೆಪಿಗೆ ಶಿವಸೇನೆ ಶುಕ್ರವಾರ ಆಗ್ರಹಿಸಿದೆ.

ಈ ಕುರಿತಂತೆ ಕೆಡಿಎಂಸಿ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ್ ರ್ಯಾಲಿಯಲ್ಲಿ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ಸರ್ಕಾರ ಇದೇ ರೀತಿಯಾಗಿ ಅಹಂಕಾರದಲ್ಲಿ ಮೆರೆದಿದ್ದೇ ಆದರೆ, ನಮ್ಮ ಬೆಂಬಲವನ್ನು ನಾವು ಹಿಂಪಡೆಯುತ್ತೇವೆ. ಒಂದು ವೇಳೆ ಸರ್ಕಾರ ತನ್ನ ಕಾರ್ಯತಂತ್ರಗಳನ್ನು ದುರುಪಯೋಗ ಮಾಡಿಕೊಂಡಿದ್ದೇ ಆದರೆ ನಾವು ಆ ಸರ್ಕಾರವನ್ನು ರಸ್ತೆಗೆ ತಂದು ನಿಲ್ಲಿಸುತ್ತೇವೆ. ಇಂದಿರಾ ಗಾಂಧಿಯವರನ್ನೇ ಕಿತ್ತೆಸೆದ ನಮ್ಮ ಜನಕ್ಕೆ ಇನ್ನು ಬಿಜೆಪಿಯವರು ಯಾವ ಲೆಕ್ಕ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯವರು ತಮ್ಮ ಸೊಕ್ಕಿ ನಡೆಯನ್ನು ಬಿಟ್ಟು ದೀಪಾವಳಿ ಹಬ್ಬದ ಒಳಗಾಗಿ ಬೇಳೆಕಾಳ ದರವನ್ನು ಇಳಿಸುವಂತೆ ಆಗ್ರಹಿಸಿದ್ದಾರೆ.

ಚುನಾವಣೆ ಸಂಬಂಧ ಇಂದು ಸೇನೆ ನಡೆಸಿದ ರ್ಯಾಲಿಯಲ್ಲಿ ಸಾಕಷ್ಟು ನಾಟಕೀಯ ಬೆಳೆವಣಿಗೆಗಳು ಕಂಡುಬಂದಿತ್ತು. ಮಹಾರಾಷ್ಟ್ರದ ಸರ್ಕಾರ ನನ್ನ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದ ಮಹಾರಾಷ್ಟ್ರದ ಪಿಡಬ್ಸ್ಯೂಡಿ ಸಚಿವ ಏಕನಾಥ್ ಶಿಂಧೆ ಅವರು ರ್ಯಾಲಿ ವೇಳೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರಿಗೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಶಿಂಧೆಯವರ ರಾಜೀನಾಮೆಯನ್ನು ಉದ್ಧವ್ ಠಾಕ್ರೆಯವರು ಸ್ವೀಕರಿಸಲು ನಿರಾಕರಿಸಿದ್ದರು.

ಶಿಂಧೆಯವರ ರಾಜೀನಾಮೆ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,  ಶಿವಸೇನೆಯೊಂದು ನಾಟಕದ ಕಂಪನಿಯಿದ್ದಂತೆ. ಕಲ್ಯಾಣ್-ಡೋಂಬಿವಲಿಯಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಎಲ್ಲಿ ಸೋಲನ್ನು ಅನುಭವಿಸುತ್ತೇವೆಯೇ ಎಂಬ ನಿರಾಶೆಯಲ್ಲಿ ಬಿಜೆಪಿ ಹಾಗೂ ಶಿವಸೇನೆಯಿದೆ.ಹುಲಿ ಹೆಜ್ಜೆ ಬಗ್ಗೆ ನಮಗೆ ಹೇಳಬೇಡಿ. ನಾವು ಹುಲಿ ಬಾಯಿಯೊಳಗೆ ಕೈ ಹಾಕಿ ಅದರ ಹಲ್ಲಿನ ಸಂಖ್ಯೆ ಎಣಿಸುವವರು ನಾವು. ಶಿಂಧೆ ರಾಜಿನಾಮೆಯೊಂದು ನಾಟಕೀಯ ಬೆಳವಣಿಗೆಯಾಗಿದ್ದು, ಇದರಿಂದ ಯಾರೂ ಭಯ ಪಡಬೇಕಿಲ್ಲ. ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com