

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟರ್ ವರದಿ ಆಧಾರದ ಮೇಲೆ ಅಮಿತ್ ಶಾ ಅವರನ್ನು ನರಭಕ್ಷಕ ಹಾಗೂ ಹುಚ್ಚ ಎಂದಿದ್ದ ಲಾಲು ವಿರುದ್ಧ ನಿನ್ನೆ ಪಾಟ್ನಾದ ಸಚಿವಾಲಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಆರ್ ಲಕ್ಷ್ಮಣಯ್ಯ ಅವರು ಹೇಳಿದ್ದಾರೆ.
ಮ್ಯಾಜಿಸ್ಟ್ರೇಟರ್ ಸುಜಿತ್ ಕುಮಾರ್ ಸಿನ್ಹಾ ಅವರ ವರದಿ ಆಧಾರದ ಮೇಲೆ ಅಮಿತ್ ಶಾ ಅವರನ್ನು ನರಭಕ್ಷಕ ಹಾಗೂ ಪ್ರಧಾನಿಯವರನ್ನು ಬ್ರಹ್ಮಪಿಶಾಚಿ ಎಂದಿದ್ದ ಲಾಲು ವಿರುದ್ಧ ಮುಜಾಫರ್‌ನಗರದ ಕಂಠಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಹಾಗೂ ಜನಪ್ರತಿನಿಧಿ ಕಾಯ್ದೆಯಡಿ ಲಾಲು ಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.