ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸಬೇಕೇ ವಿನಾ, ನಿರ್ಲಕ್ಷಿಸದಿರಿ: ಮೆಹ್ತಾ

ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರಿಗೆ ಖ್ಯಾತ ಸಂಗೀತಗಾರ ಝುಬಿನ್ ಮೆಹ್ತಾ ಬೆಂಬಲ ವ್ಯಕ್ತಪಡಿಸಿದ್ದಾರೆ...
ಖ್ಯಾತ ಸಂಗೀತಗಾರ ಝುಬಿನ್ ಮೆಹ್ತಾ (ಸಂಗ್ರಹ ಚಿತ್ರ)
ಖ್ಯಾತ ಸಂಗೀತಗಾರ ಝುಬಿನ್ ಮೆಹ್ತಾ (ಸಂಗ್ರಹ ಚಿತ್ರ)

ನವದೆಹಲಿ: ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರಿಗೆ ಖ್ಯಾತ ಸಂಗೀತಗಾರ ಝುಬಿನ್ ಮೆಹ್ತಾ ಬೆಂಬಲ ವ್ಯಕ್ತಪಡಿಸಿದ್ದಾರೆ.

``ಕಲಾವಿದರ ಅಭಿಪ್ರಾಯಗಳನ್ನು ಸರ್ಕಾರ ಸ್ವಾಗತಿಸ ಬೇಕೇ ವಿನಾ, ಅವುಗಳನ್ನು ನಿರ್ಲಕ್ಷಿಸುವುದು ಸಲ್ಲ. ಭಾರತವು ವಿಶ್ವದ ಅತಿದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ. ಇಲ್ಲಿ ಸಂಪೂರ್ಣ ಅಬಿsವ್ಯಕ್ತಿ ಸ್ವಾತಂತ್ರ್ಯವಿರಬೇಕು'' ಎಂದಿದ್ದಾರೆ. ಪ್ರಶಸ್ತಿ ವಾಪಸಿಯನ್ನು ನಾನು ಬೆಂಬಲಿ ಸುತ್ತೇನೆ. ಅಂಥ ದಿಟ್ಟ ನಿರ್ಧಾರ ಕೈಗೊಂಡ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಅವರು ಬೀದಿಗೆ ಬಂದು ಹೋರಾಡಲು ಸಾಧ್ಯವಿಲ್ಲ. ಪ್ರಶಸ್ತಿ ವಾಪಸ್ ನೀಡುವುದೇ ಅವರಿಗಿರುವ ಆಯ್ಕೆ ಎಂದೂ ಹೇಳಿದ್ದಾರೆ ಮೆಹ್ತಾ.

ಜೊತೆಗೆ, ಇಲ್ಲಿ ಸರ್ಕಾರ ಮತ್ತು ಜನರ ನಡುವೆ ಸಂವಹನದ ಕೊರತೆಯಿದೆ. ಸಾಹಿತಿಗಳು ಸರ್ಕಾರದ ಜೊತೆ ಕುಳಿತು, ಮಾತುಕತೆ ನಡೆಸಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ. ಇದೇ ವೇಳೆ, ಮಸಿ ದಾಳಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗರಿಗೆ ನಿರ್ಬಂಧದಂತಹ ಕ್ರಮಗಳನ್ನು ಅವರು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com