ಬಾಂಗ್ಲಾದಲ್ಲಿ ಪ್ರಕಾಶಕನ ಹತ್ಯೆ ಮತ್ತೆ ಮೂವರಿಗೆ ಗುಂಡು

ನಾಲ್ವರು ಜಾತ್ಯತೀತ ಬ್ಲಾಗರ್‍ಗಳ ಹತ್ಯೆಯ ಬಳಿಕ ಈಗ ಬಾಂಗ್ಲಾದಲ್ಲಿ ಮತ್ತೆ ಒಬ್ಬ ಪ್ರಕಾಶಕರನ್ನು ಹತ್ಯೆಗೈಯ್ಯಲಾಗಿದ್ದು, ಮೂವರ ಮೇಲೆ ಗುಂಡಿನ ದಾಳಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಢಾಕಾ: ನಾಲ್ವರು ಜಾತ್ಯತೀತ ಬ್ಲಾಗರ್‍ಗಳ ಹತ್ಯೆಯ ಬಳಿಕ ಈಗ ಬಾಂಗ್ಲಾದಲ್ಲಿ ಮತ್ತೆ ಒಬ್ಬ ಪ್ರಕಾಶಕರನ್ನು ಹತ್ಯೆಗೈಯ್ಯಲಾಗಿದ್ದು, ಮೂವರ ಮೇಲೆ ಗುಂಡಿನ ದಾಳಿ ನಡೆದಿದೆ.

ಶನಿವಾರ ಢಾಕಾದಲ್ಲಿ ಪಬ್ಲಿಷಿಂಗ್ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಇಬ್ಬರು ಲೇಖಕರು ಮತ್ತು ಒಬ್ಬ ಪ್ರಕಾಶಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ. ನಂತರ, ಬಾಗಿಲು ಒಡೆದು ಅವರನ್ನು ರಕ್ಷಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಅಬ್ದುಲ್ಲಾ ಅಲ್ ಮಮೂನ್ ತಿಳಿಸಿದ್ದಾರೆ.

ಹಲ್ಲೆಗೊಳಗಾಗಿರುವ ರಣದೀಪ್ ಬಸು, ತಾರೀಕ್ ರಹೀಂ, ತುತುಲ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ತುತುಲ್ ಸ್ಥಿತಿ ಚಿಂತಾಜನಕವಾಗಿದೆ. ಮತ್ತೊಂದು ಘಟನೆಯಲ್ಲಿ ದುರ್ಷರ್ಮಿಗಳು, ಪ್ರಕಾಶಕ ಫೈಸಲ್ ಅರೆಫಿನ್ ದೀಪನ್ (43) ಕಚೇರಿಗೆ ನುಗ್ಗಿ, ಭುಜಕ್ಕೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಇವರು ಕಳೆದ ಫೆಬ್ರವರಿಯಲ್ಲಿ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಜಾತ್ಯತೀಯ ಬ್ಲಾಗರ್ ಅವಿಜಿತ್ ರಾಯ್ ಅವರ ಆಪ್ತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com