
ಸೂರತ್: ತಾನು ಭವಿಷ್ಯದ ಸರ್ದಾರ್ ಪಟೇಲ್ ಎನ್ನುವ ಮೂಲಕ ದೇಶದ ಜನತೆಯ ಹುಬ್ಬೇರಿಸಿದ್ದ ಗುಜರಾತ್‍ನ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಇದೀಗ ಮತ್ತೊಂದು ಹೊಸ ಹೇಳಿಕೆ ನೀಡಿದ್ದು, ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಗೆ ಪ್ರತಿಯಾಗಿ ತಾನು ಸೆ.5ರಂದು ದಂಡಿಯಿಂದ ಅಹಮದಾಬಾದ್‍ವರೆಗೆ ಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.
ಈ ಮೂಲಕ ಪಟೇಲರಿಗೆ ಮೀಸಲು ಕೊಡಿಸುವ ನಿಟ್ಟಿನ ಹೋರಾಟದ ಎರಡನೇ ಹಂತ ಆರಂಭಿಸುವುದಾಗಿ ಹೇಳಿದ್ದಾರೆ. 350 ಕಿಮೀ ದೂರ ನಡೆದು ಪಟೇಲ್ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರ್ಪಡೆ ಮಾಡುವ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ಇದಲ್ಲದೆ, ಇಲ್ಲಿನ ಲಾಜ್‍ಪುರ ಜೈಲಿಗೆ ತೆರಳಿ ಬಂಧಿತರಾಗಿರುವ 40 ಯುವಕರನ್ನು ಭೇಟಿಯಾಗಿ,ಯೋಗ ಕ್ಷೇಮ ವಿಚಾರಿಸಿದರು ಹಾರ್ದಿಕ್ ಪಟೇಲ್. ಬಾಳ್ ಠಾಕ್ರೆಯ ಪ್ರಭಾವ ಮತ್ತು ಅರವಿಂದ ಕೇಜ್ರಿವಾಲ್ ಅವರ ದೂರದೃಷ್ಟಿಯ ಅಭಿಮಾನಿ ತಾನು ಎಂದಿದ್ದ ಪಟೇಲ್ ಇದೀಗ, ಮಹಾತ್ಮ ಗಾಂಧಿಯ ದಂಡಿಯಾತ್ರೆಯನ್ನೇ ತದ್ವಿರುದ್ಧ ದಿಕ್ಕಿನಲ್ಲಿ ಸಂಘಟಿಸುವ ಮಾತನಾಡಿದ್ದಾರೆ.
Advertisement