ಉಬರ್ ನಲ್ಲಿ ನಗದು ಪಾವತಿಸುವ ವ್ಯವಸ್ಥೆ ಬೆಂಗಳೂರಿಗೂ ವಿಸ್ತರಣೆ

ಉಬರ್ ಸಂಸ್ಥೆ ಬೆಂಗಳೂರು, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಹಣ ಪಾವತಿಸುವ ಆಯ್ಕೆಯನ್ನು ವಿಸ್ತರಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉಬರ್ ಸಂಸ್ಥೆ ಬೆಂಗಳೂರು, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಹಣ ಪಾವತಿಸುವ ಆಯ್ಕೆಯನ್ನು ವಿಸ್ತರಿಸಿದ್ದು, ಸವಾರರು ನಗದು ಮೂಲಕ ಸಹ ಹಣ ಪಾವತಿಸಬಹುದು ಎಂದು ಉಬರ್ ಟ್ಯಾಕ್ಸಿ ಸಂಚಾರ ಸಂಸ್ಥೆ ತಿಳಿಸಿದೆ.

 ಈ ಮೂರೂ ನಗರಗಳಲ್ಲಿ ಪ್ರಯಾಣಿಕರು ಪ್ರಯಾಣ ಮುಗಿಸಿದ ನಂತರ ಚಾಲಕನಿಗೆ ನಗದು ಮೂಲಕ ಹಣ ಪಾವತಿಸಬಹುದು. ಮುಂದಿನ ಕೆಲವು ವಾರಗಳಲ್ಲಿಯೇ ಈ ಸೌಲಭ್ಯ ಜಾರಿಗೆ ಬರಲಿದೆ.ಅಹಮದಾಬಾದ್, ಭುವನೇಶ್ವರ, ಚಂಡೀಗಢ್, ಚೆನ್ನೈ, ಕೊಯಂಬತ್ತೂರು, ಗುವಾಹಟಿ, ಹೈದಾರಾಬಾದ್, ಇಂದೋರ್, ಜೈಪುರ್, ಕೊಚ್ಚಿ, ಮೈಸೂರು, ನಾಗ್ಪುರ, ನಾಸಿಕ್, ಪುಣೆ, ಸೂರತ್, ತಿರುವನಂತಪುರ, ವಡೋದರ ಮತ್ತು ವಿಶಾಖಪಟ್ನಂನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.

ಇದುವರೆಗೆ ಉಬರ್ ಸಂಸ್ಛೆಯ ಟ್ಯಾಕ್ಸಿಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡು, ಡಿಜಿಟಲ್ ವಾಲೆಟ್ ಗಳಾದ ಪೆಟಿಮ್, ಏರ್ ಟೆಲ್ ಮನಿ ಮೊದಲಾದವುಗಳ ಮೂಲಕ ಹಣ ಪಾವತಿಸಬೇಕಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com