
ಚೆನ್ನೈ: ರೈತರ ಸಮಸ್ಯೆಗಳನ್ನು ಚರ್ಚಿಸಲೆಂದು ಕರೆದಿದ್ದ ಸರ್ಕಾರಿ ಸಭೆಯೊಂದರಲ್ಲಿ ಗಂಭೀರ ರ್ಚೆ ನಡೆಯುತ್ತಿರುವಾಗ ರೆವಿನ್ಯೂ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಸೆಲ್ ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಸಗಾ ಆಡುವುದರಲ್ಲಿ ಮಗ್ನರಾಗಿದ್ದರು.
ಚೆನ್ನೈನ ಧರ್ಮಪುರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕವಿತಾ ಎಂಬ ಈ ಅಧಿಕಾರಿ ಆಟವಾಡುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಜಿಲ್ಲಾಧಿಕಾರಿ ಕೆ ವಿವೇಕಾನಂದನ್ ಪಕ್ಕದಲ್ಲಿಕೂತಿದ್ದ ಈಕೆ, 12ಕ್ಕೂ ಹೆಚ್ಚು ರೈತರು ಗಂಭೀರವಾಗಿ ತಮ್ಮ ಸಮಸ್ಯೆ ವಿವರಿಸುತ್ತಿದ್ದರೆ, ಟೇಬಲ್ ಮರೆ ಯಲ್ಲಿ ಮೊಬೈಲಲ್ಲಿ ಗೇಮ್ ಆಡುತ್ತಿದ್ದರು.
ಪೂರ್ತಿ ಆಟ ಆಡಿಯೇ ಗೇಮ್ ಕ್ಲೋಸ್ ಮಾಡಿದರೆಂದು ಕ್ಯಾಮೆರಾದಲ್ಲಿ ದಾಖಲಾಗಿದೆ. ವೈರಲ್ ಆಗಿರುವ ಕವಿತಾ ಫೋಟೋ ನೋಡಿ ಸ್ಥಳೀಯ ನಾಯಕರು ಮತ್ತು ಜನತೆ ಆಕ್ರೋಶಗೊಂಡು ಅಧಿಕಾರಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಕವಿತಾ ಅವರಿಂದ ವಿವರಣೆ ಕೇಳಿರುವುದಾಗಿ ತಿಳಿಸಿದ್ದಾರೆ.
Advertisement