ಹಾರ್ಲೆ ಬೈಕ್ ಕದ್ದ ಖದೀಮ ಅಂದರ್
ಹಾರ್ಲೆ ಬೈಕ್ ಕದ್ದ ಖದೀಮ ಅಂದರ್

ಟೆಸ್ಟ್ ಡ್ರೈವ್ ನೆಪ ಹೇಳಿ ಹಾರ್ಲೆ ಬೈಕ್ ಕದ್ದ ಖದೀಮ ಅಂದರ್

ಹೈದರಾಬಾದ್ ನ ಬಂಜಾರ ಹಿಲ್ಸ್ ನ ಶೋರೂಂವೊಂದರಲ್ಲಿ ಟೆಸ್ಟ್ ಡ್ರೈವ್ ನೆಪ ಹೇಳಿ ಆರು ಲಕ್ಷ ರುಪಾಯಿ ಮೊತ್ತದ ಹಾರ್ಲೆ ಡೇವಿಡ್ಸನ್ ಬೈಕ್ ನೊಂದಿಗೆ...
Published on
ಹೈದರಾಬಾದ್: ಹೈದರಾಬಾದ್ ನ ಬಂಜಾರ ಹಿಲ್ಸ್ ನ ಶೋರೂಂವೊಂದರಲ್ಲಿ ಟೆಸ್ಟ್ ಡ್ರೈವ್ ನೆಪ ಹೇಳಿ ಆರು ಲಕ್ಷ ರುಪಾಯಿ ಮೊತ್ತದ ಹಾರ್ಲೆ ಡೇವಿಡ್ಸನ್ ಬೈಕ್ ನೊಂದಿಗೆ ಪರಾರಿಯಾಗಿದ್ದ ಕಳ್ಳನನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ. 
ಬಂಧಿತ ಆರೋಪಿ 30ರ ಹರೆಯದ ಟಿ. ಕಿರಣ್ ಎಂದು ತಿಳಿದುಬಂದಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಪದವೀಧರನಾಗಿದ್ದು, ಸರ್ಕಾರಿ ಸ್ವಾಮ್ಯದ ಪ್ರಮುಖ ತೈಲ ಸಂಸ್ಥೆ ಒಎನ್ಜಿಸಿಯ ಉದ್ಯೋಗಿಯು ಆಗಿದ್ದಾನೆ. ಕಿರಣ್ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಸದ್ಯ ಹೈದರಾಬಾದ್ ನಲ್ಲಿ ವಾಸವಾಗಿದ್ದರು. 
ನಿನ್ನೆ ಹಾರ್ಲೆ ಡೇವಿಡ್ಸನ್ ಶೋ ರೂಂಗೆ ಭೇಟಿ ಕೊಟ್ಟಿದ್ದ ಕಿರಣ್ ಸಿಬ್ಬಂದಿ ಬಳಿ ತಾನು ತಾಹೀರ್ ಅಲಿ ಎಂದು ಪರಿಚಯಿಸಿಕೊಂಡಿದ್ದು, 750 ಸಿಸಿ ಎಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ಸನ್ ಟೆಸ್ಟ್ ಡ್ರೈವ್ ಗಾಗಿ ಬೇಡಿಕೆಯಿಟ್ಟ ಇದನ್ನು ನಂಬಿದ ಸಿಬ್ಬಂದಿ ಆತನಿಗೆ ಅನುವು ಮಾಡಿಕೊಟ್ಟಿದ್ದರು. 
ಟೆಸ್ಟ್ ಡ್ರೈವ್ ಗಾಗಿ ಬೈಕ್ ಜತೆ ರಸ್ತೆಗಿಳಿದ ಕಿರಣ್ ಹಾರ್ಲೆಯೊಂದಿಗೆ ಪರಾರಿಯಾಗಿದ್ದ ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಾವಳಿಗಳನ್ನೇ ಬಳಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com