ಸೆ.9 -13 ವರೆಗೆ ಭಾರತ- ಪಾಕ್ ಬಿಎಸ್ಎಫ್ ಮಹಾನಿರ್ದೇಶಕರ ಸಭೆ

ಭಾರತ-ಪಾಕಿಸ್ತಾನ ಮಹಾನಿರ್ದೇಶಕರ ನಡುವಿನ ಸಭೆ 9 -13 ವರೆಗೆ ನಡೆಯಲಿದೆ. ದೇವೇಂದ್ರ ಕುಮಾರ್ ಪಾಠಕ್ ನೇತೃತ್ವದಲ್ಲಿ ಭಾರತದ ಬಿಎಸ್ಎಫ್ ಪಡೆ ಸಭೆಯಲ್ಲಿ ಭಾಗವಹಿಸಲಿದೆ.
ಸೆ.9 -13 ವರೆಗೆ ಭಾರತ- ಪಾಕ್ ಬಿಎಸ್ಎಫ್ ಮಹಾನಿರ್ದೇಶಕರ ಸಭೆ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆ, ಕಚ್ಛ್ ನ ರಣ್ ಪ್ರದೇಶದಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ವಿಷಯಗಳು ಸೆ.9 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಗಡಿ ಭದ್ರತಾ ಪಡೆ ಮಹಾನಿರ್ದೇಶಕರುಗಳ ಸಭೆಯಲ್ಲಿ ಚರ್ಚೆಯಾಗಲಿವೆ.

ಪಾಕಿಸ್ತಾನ ರೇಂಜರ್ ಮಹಾನಿರ್ದೇಶಕ ಉಮರ್ ಫಾರೂಕ್ ಬುಕಾರಿ ನೇತೃತ್ವದ 16 ಸದಸ್ಯರ ನಿಯೋಗ ಅಟ್ಟಾರಿ- ವಾಘ ಗಡಿ ಮೂಲಕ ಪಂಜಾಬ್ ಗೆ ಪ್ರಯಾಣ ಬೆಳೆಸಲಿದ್ದು ಭಾರತದ ಬಿಎಸ್ಎಫ್ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಹಾನಿರ್ದೇಶಕರ ನಡುವಿನ ಸಭೆ 9 -13 ವರೆಗೆ ನಡೆಯಲಿದೆ. ದೇವೇಂದ್ರ ಕುಮಾರ್ ಪಾಠಕ್ ನೇತೃತ್ವದಲ್ಲಿ ಭಾರತದ ಬಿಎಸ್ಎಫ್ ಪಡೆ ಸಭೆಯಲ್ಲಿ ಭಾಗವಹಿಸಲಿದೆ.

ಗುಜರಾತ್ ನ ಕಚ್ಛ್ ನಲ್ಲಿರುವ ಹರಾಮಿ ನಲ್ಲಹ್ ಪ್ರದೇಶದಲ್ಲಿ ಒಳನುಸುಳುವಿಕೆ, ಕಳ್ಳಸಾಗಣೆ ನಡೆಯುತ್ತಿರುವುದು ಚರ್ಚೆಗೆ ಬರುವ ಪ್ರಮುಖ ವಿಷಯಗಳೆಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com