ಬಿಜೆಪಿಗೆ ಅಧಿಕಾರ ಸಿಗಲು ಕಾಂಗ್ರೆಸ್ ತಪ್ಪು ನೀತಿಗಳೇ ಕಾರಣ: ಮುಲಾಯಂ ಸಿಂಗ್

ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್
Updated on

ಮೈನ್ ಪುರಿ: ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.

ಕಾಂಗ್ರೆಸ್ ನ ತಪ್ಪು ನೀತಿಗಳು ಬಿಜೆಪಿಗೆ ಅಧಿಕಾರ ಪಡೆಯಲು ನೆರವಾಯಿತು, ಇದಕ್ಕೆ ಸೆಕ್ಯುಲರ್ ಪಕ್ಷಗಳೂ ಸಹ ಪರೋಕ್ಷವಾಗಿ ಸಹಾಯ ಮಾಡಿವೆ ಎಂದಿದ್ದಾರೆ ಮುಲಾಯಂ ಸಿಂಗ್ ಯಾದವ್. ಉತ್ತರ ಪ್ರದೇಶದಲ್ಲಿ ಸೈನಿಕ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಲಾಯಂ ಸಿಂಗ್,

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅದರ ತಪ್ಪು ನೀತಿಗಳೇ ಕಾರಣ, 2017 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮಹತ್ವವಾಗಿದ್ದು, ಸಮಾಜವಾದಿ ಪಕ್ಷವೇ ಮತ್ತೆ ಸರ್ಕಾರ ರಚಿಸಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ. ಬಡವರಿಗಾಗಿ, ಹಿಂದುಳಿದವರಿಗಾಗಿ ಅತಿ ಹೆಚ್ಚು ಕೆಲಸ ಮಾಡಿರುವ ಏಕೈಕ ಸರ್ಕಾರ ಸಮಾಜವಾದಿ ಸರ್ಕಾರ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮಂತ್ರಿ ಹುದ್ದೆ ಕೈತಪ್ಪಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಮುಲಾಯಂ ಸಿಂಗ್ ಯಾದವ್, ಪ್ರಧಾನಿಯಾಗುವುದು ದೊಡ್ಡ ವಿಷಯವಲ್ಲ, ಹಿಂದುಳಿದ, ಬಡವರ್ಗದ ಏಳಿಗೆಗಾಗಿ ಶ್ರಮಿಸುವುದು ಮುಖ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com