ಸೇತುವೆ ಕುಸಿತ: ಇಬ್ಬರು ಐಐಟಿ ಪ್ರಾಧ್ಯಾಪಕರ ಬಂಧನ

ತೆಹ್ರಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿದ್ದ ಪ್ರಕರಣದಲ್ಲಿ ರೂರ್ಕಿ ಐಐಟಿಯ ಇಬ್ಬರು ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ.
ಸೇತುವೆ ಕುಸಿತ: ಇಬ್ಬರು ಐಐಟಿ ಪ್ರಾಧ್ಯಾಪಕರ ಬಂಧನ

ಡೆಹ್ರಾಡೂನ್: ತೆಹ್ರಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿದ್ದ ಪ್ರಕರಣದಲ್ಲಿ ರೂರ್ಕಿ ಐಐಟಿಯ ಇಬ್ಬರು ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ.

ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಪುಲ್ ಪ್ರಕಾಶ್ ಹಾಗೂ ವಿಜಯ್ ಕುಮಾರ್ ಐಐಟಿಯ ಬಂಧಿತ ಪ್ರಾಧ್ಯಾಪಕರು ಎಂದು ಹರಿದ್ವಾರ್ ಎಸ್.ಎಸ್.ಪಿ ಸ್ವೀಟಿ ಅಗರ್ವಾಲ್ ತಿಳಿಸಿದ್ದಾರೆ. ಇಬ್ಬರೂ ಪ್ರಾಧ್ಯಾಪಕರು ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಪರಿಣಾಮ ಬಂಧನಕ್ಕೊಳಗಾಗಿದ್ದಾರೆ.  

ಅಲಕಾನಂದ ನದಿಯ ಮೇಲೆ ಸೇತುವೆ ನಿರ್ಮಿಸುವುದಕ್ಕಾಗಿ ಈ ಇಬ್ಬರೂ ಪ್ರಾಧ್ಯಾಪಕರು ವಿನ್ಯಾಸ ರಚಿಸಿದ್ದರು, ಆದರೆ 2012 ರಲ್ಲಿ ನಿರ್ಮಾಣ ಹಂತದಲ್ಲೇ ಈ ಮೇಲ್ಸೇತುವೆ ಕುಸಿದು ಬಿದ್ದಿತ್ತು, ಈ ಅಪಘಾತದಲ್ಲಿ 8 ಜನರು ಮೃತಪಟ್ಟಿದ್ದರು. ಸೇತುವೆ ನಿರ್ಮಾಣ ಮಾಡುತ್ತಿದ್ದ ಎರಡು ಕಂಪನಿಯ ಮಾಲಿಕರನ್ನು ಕಳೆದ ಗುರುವಾರ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com