ಎಲ್ಲೆಲ್ಲೂ ಔರಂಗಜೇಬ್

ಒಂದು ಹೆಸರು ಹೋದರೇನು, ಇನ್ನೂ ಇವೆ 177! ಇದು ಮೊಘಲ್ ದೊರೆ ಔರಂಗಾಜೇಬ್ ಕುರಿತಂತೆ ಹೇಳಬಹುದಾದ ಸಾಲು. ದೆಹಲಿಯ ಔರಂಗಜೇಬ್ ರಸ್ತೆಗೆ...
ದೆಹಲಿಯ ಔರಂಗಜೇಬ್ ರಸ್ತೆ
ದೆಹಲಿಯ ಔರಂಗಜೇಬ್ ರಸ್ತೆ
Updated on

ನವದೆಹಲಿ:  ಒಂದು ಹೆಸರು ಹೋದರೇನು, ಇನ್ನೂ ಇವೆ 177! ಇದು ಮೊಘಲ್ ದೊರೆ ಔರಂಗಾಜೇಬ್ ಕುರಿತಂತೆ ಹೇಳಬಹುದಾದ ಸಾಲು. ದೆಹಲಿಯ ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ ಹೆಸರಿಡಲು ಅರವಿಂದ ಕೇಜ್ರಿವಾಲ್ ಸರ್ಕಾರ ಮುಂದಾಗುತ್ತಿದ್ದಂತೆ ಭಾರಿ ವಿವಾದವೇ ಎದ್ದಿತ್ತು.
ಆದರೆ ಔರಂಗಜೇಬ್ ರಸ್ತೆಯ ಹೆಸರು ಅಳಿಸಿದರೇನೂ ಚಿಂತಿಸಬೇಕಿಲ್ಲ, ದೇಶದ ಉದ್ದಗಲಕ್ಕೂ ಅವರ ಹೆಸರಿನ ಊರು, ಕೇರಿ, ರಸ್ತೆ, ನಗರ ಮತ್ತು
ಹಳ್ಳಿಗಳಿವೆ. ಹೀಗಾಗಿ ಔರಂಗಾಜೇಬ್ ಅಭಿಮಾನಿಗಳು ಚಿಂತಿಸಬೇಕಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಔರಂಗಜೇಬ್ ಹೆಸರಿನ ಕುರಿತಂತೆ ಸಿಕ್ಕಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಒಟ್ಟು ಆತನ ಹೆಸರಲ್ಲಿ 177 ನಗರ, ಹಳ್ಳಿ ಮತ್ತು ರಸ್ತೆಗಳಿವೆ. ಈ ಸಂಗತಿ ಗೊತ್ತಾಗಿದ್ದು 2011ರ ಜನಗಣತಿ ವರದಿಯಲ್ಲಿ. 1658ರಿಂದ 1707ರ ತನಕ 49 ವರ್ಷಗಳ ಕಾಲ ಭಾರತವನ್ನಾಳಿದ್ದ ಔರಂಗಜೇಬ್‍ನ ಹೆಸರು ಸೂಚಿ ಸುವ ಪಟ್ಟಣಗಳ ದೊಡ್ಡ ಪಟ್ಟಿಯೇ ಇದೆ. ದೇಶದಲ್ಲಿ ಔರಂಗಬಾದ್ ಎಂಬ ಹೆಸರಿನದ್ದೇ 63 ಪಟ್ಟಣಗಳಿದ್ದು, ಅವುಗಳಲ್ಲಿ 48 ಉತ್ತರಪ್ರದೇಶವೊಂದರಲ್ಲೇ ಇವೆ.
ಉತ್ತರಪ್ರದೇಶದಲ್ಲಿ ಔರಂಗಜೇಬ್‍ನ ಹೆಸರಿರುವ ಒಟ್ಟು 114 ಗ್ರಾಮ ಮತ್ತು ಪಟ್ಟಣಗಳಿದ್ದು ಇದು ದೇಶದಲ್ಲಿಯೇ ಗರಿಷ್ಠ! ಔರಂಗಾಬಾದ್ ಹೊರತು ಪಡಿಸಿದರೆ, ಔರಂಗಾ-ಪುರ/ಔರಂಗಾಪುರ್ ಹೆಸರಿನ
35 ಜಾಗಗಳಿವೆ. ಔರಂಗ ಹೆಸರಿನಲ್ಲಿ 17 ಜಾಗಗಳಿದ್ದರೆ, ಔರಂಗಾನಗರ, ಔರಂಗಜೇಬ್‍ಪುರ, ಔರಂಗ್ ಫೋರ್, ಔರಂಗ್‍ಬೆರ್ ಮುಂತಾದ 38 ಹಳ್ಳಿಗಳು ಔರಂಗಾಬಾದ್ ಖಾಲ್ಸಾ, ಔರಂಗಬಾದ್ ದಲ್ ಚಂದ್, ಔರಂಗಾ ಬಾದ್ ಭೋಲಾ ಹುಲಾಶ್ ಮತ್ತು ಸಲ್ಹಾಪುರ್ ಔರಂಗಾಬಾದ್ ಎಂಬ ಹೆಸರುಗಳಿಗೆ ತಳಕುಹಾಕಿಕೊಂಡಿವೆ. ಮೊಗಲ್ ದೊರೆ ತನ್ನ ದುರಾಡಳಿತದಿಂದ ಕುಖ್ಯಾತಿ ಗಳಿಸಿದ್ದನೆಂಬ ಕಾರಣ ನೀಡಿ ಪೂರ್ವ ದೆಹಲಿಯ ಬಿಜೆಪಿ ಸಂಸದ ಮಹೇಶ್ ಗಿರಿ ಔರಂಗಜೇಬ್ ಹೆಸರಿನಲ್ಲಿದ್ದ ದೆಹಲಿಯ ರಸ್ತೆಯೊಂದರ ಹೆಸರನ್ನು ಬದಲಿಸಿ ಕಲಾಂ ಹೆಸರಿಡುವ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬದಲಾವಣೆಗೂ ಮುನ್ನವೇ ನಗರದ ಹೆಸರನ್ನು ಬದಲಿಸಬೇಕೆಂದು ಶಿವಸೇನೆ ಪಟ್ಟುಹಿಡಿದಿತ್ತು. ಹಿಂದೂವಿರೋಧಿ ರಾಜನಾಗಿದ್ದ ಆತನ ಹೆಸರನ್ನು ಎಲ್ಲೂ ಬಳಸಕೂಡದೆಂಬ ಒತ್ತಾಯ ಇನ್ನೂ ಮುಂದುವರಿದಿದೆ. ಉತ್ತರ ಪ್ರದೇಶ ಹೊರತುಪಡಿಸಿದರೆ ಔರಂಗಜೇಬ್‍ನ ಹೆಸರು ಮಹಾ ರಾಷ್ಟ್ರ ದಲ್ಲಿ(26) ಹೆಚ್ಚು ಜಾಗಗಳಿಗೆ ಇಡಲಾಗಿದೆ. ತೃತೀಯ ಸ್ಥಾನ ಬಿಹಾರಕ್ಕೆ(12) ಸಲ್ಲುತ್ತದೆ. ಮಿಕ್ಕಂತೆ ಆಂಧ್ರಪ್ರದೇಶ(4), ಗುಜರಾತ್(2), ಹಯರ್Áಣ(7), ಮಧ್ಯ ಪ್ರದೇಶ(7), ರಾಜಸ್ಥಾನ(1), ಉತ್ತರ ಖಂಡ್ (3) ಮತ್ತು ಪಶ್ಚಿಮ ಬಂಗಾಳ(1)ಗಳಲ್ಲೂ ಔರಂಗ ಜೇಬ್ ಅಂಕಿತದ ರಸ್ತೆ, ಪಟ್ಟಣಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com