ದನದ ಮಾಂಸ ಅನಾರೋಗ್ಯಕರ ಎಂದು ಕುರಾನ್ ಹೇಳಿಲ್ಲ: ಶಾಹಿದ್ ಸಿದ್ದಿಕಿ

ದನದ ಮಾಂಸ ಆರೋಗ್ಯಕ್ಕೆ ಹಾನಿಕರ ಎಂದಿರುವ ಗುಜರಾತ್ ಸರ್ಕಾರದ ಪವಿತ್ರ ಕುರಾನ್ ಪೀಠದ ಹೇಳಿಕೆಯನ್ನು ಮಂಗಳವಾರ ಮಾಜಿ ಸಂಸದ ಶಾಹಿದ್ ಸಿದ್ದಕಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದನದ ಮಾಂಸ ಆರೋಗ್ಯಕ್ಕೆ ಹಾನಿಕರ ಎಂದಿರುವ ಗುಜರಾತ್ ಸರ್ಕಾರದ ಪವಿತ್ರ ಕುರಾನ್ ಪೀಠದ ಹೇಳಿಕೆಯನ್ನು ಮಂಗಳವಾರ ಮಾಜಿ ಸಂಸದ ಶಾಹಿದ್ ಸಿದ್ದಕಿ ಅಲ್ಲಗೆಳೆದಿದ್ದಾರೆ.

"ನನಗೆ ತಿಳಿದಿರುವ ಪ್ರಕಾರ ಪವಿತ್ರ ಕುರಾನ್ ಈ ರೀತಿಯದ್ದು ಏನೂ ಹೇಳಿಲ್ಲ. ಅದು ಬೇರೆ ವಿಷಯ, ಪುರಾತನ ಮುಸ್ಲಿಮರು, ಹಸುವನ್ನು ಕೊಲ್ಲುವುದು ಇತರ ಜನರ ಭಾವನೆಗಳಿಗೆ ಧಕ್ಕೆ ತಂದರೆ ಕೊಲ್ಲುವುದು ಬೇಡ ಎಂದಿದ್ದರು" ಎಂದು ಸಿದ್ದಿಕಿ ತಿಳಿಸಿದ್ದಾರೆ.

ನೆನ್ನೆ ಗುಜರಾತಿನ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಮತ್ತು ಇಸ್ಲಾಮಿಕ್ ಚಿಹ್ನೆ ಅರ್ಧ ಚಂದ್ರ ಹೊತ್ತ ಭಿತ್ತಿಚಿತ್ರಗಳು ಅಹಮದಾಬಾದಿನ ಪ್ರದೇಶಗಳಲ್ಲಿ ರಾರಾಜಿಸಿದ್ದವು. ಇವುಗಳಲ್ಲಿ ಹಸುಗಳನ್ನು ರಕ್ಷಿಸುವ ಕುರಾನಿನ ಹೇಳಿಕೆಗಳನ್ನು, ಗೋ ಸೇವಾ ಮತ್ತು ಗೋಚಾರ ವಿಕಾಸ ಪೀಠ, ಗುಜರಾತ್ ಸರ್ಕಾರ ಎಂಬ ಹೆಸರಿನಲ್ಲಿ ಬರೆಯಲಾಗಿತ್ತು.

"ಅಕ್ರಾಮುಲ್ ಬಕ್ರಾ ಫೈನಹ ಸೈಯೇದುಲ್ ಬಹೈಮ" ಅಂದರೆ "ಹಸುಗಳಿಗೆ ಗೌರವ ತೋರಿಸಿ, ಎಕೆಂದರ ಅವುಗಳು ಎಲ್ಲ ಜಾನುವಾರುಗಳ ಮುಂದಾಳುಗಳು. ಹಸುವಿನ ಹಾಲು, ತುಪ್ಪ ಮತ್ತು ಮಜ್ಜಿಗೆಯಲ್ಲಿ ಆರೋಗ್ಯಕರ ಅಂಶಗಳಿವೆ ಮತ್ತು ಅದರ ಮಾಂಸದಿಂದ ಹಲವಾರು ರೋಗಗಳು ಬರುತ್ತವೆ" ಎಂದು ಭಿತ್ತಿಚಿತ್ರಗಳಲ್ಲಿ ಬರೆಯಲಾಗಿತ್ತು.

ಆದರೆ ಪವಿತ್ರ ಕುರಾನಿನಲ್ಲಿ ಹಸುಗಳ ಬಗ್ಗೆ ಹೇಳಲಾಗಿದೆ ಎಂದು ಸಿದ್ದಿಕಿ ತಿಳಿಸಿದ್ದಾರೆ. "ಹಾಲು ನೀಡುವ ಪ್ರಾಣಿಗಳನ್ನು ಕೊಲ್ಲಬಾರದು ಎಂದು ಕುರಾನ್ ತಿಳಿಸುತ್ತದೆ" ಎಂದು ಸಿದ್ದಿಕಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com